alex Certify
ಕನ್ನಡ ದುನಿಯಾ       Mobile App
       

Kannada Duniya

ಹುತಾತ್ಮ ಯೋಧರ ಕುಟುಂಬಕ್ಕೆ ನೆಮ್ಮದಿ ಸುದ್ದಿ

ರಕ್ಷಣಾ ಸಚಿವಾಲಯ ಹುತಾತ್ಮರ ಕುಟುಂಬಗಳಿಗೆ ನೆಮ್ಮದಿಯ ಸುದ್ದಿಯೊಂದನ್ನು ನೀಡಿದೆ. ಹುತಾತ್ಮರಾದ, ವಿಕಲಾಂಗರಾದ, ನಾಪತ್ತೆಯಾದ ಅಧಿಕಾರಿಗಳು ಹಾಗೂ ಸೈನಿಕರ ಮಕ್ಕಳ ಟ್ಯೂಷನ್ ಹಾಗೂ ಹಾಸ್ಟೆಲ್ ಶುಲ್ಕ ಪಾವತಿ ಮಿತಿಯನ್ನು ಸೀಮಿತಗೊಳಿಸದಂತೆ ಆದೇಶ ಹೊರಡಿಸಿದೆ.

ಸರ್ಕಾರ ಈ ಮಿತಿಯನ್ನು ಸೀಮಿತಗೊಳಿಸಿದ್ದ ವೇಳೆ ಸೈನಿಕರು ಹಾಗೂ ಮಾಜಿ ಸೈನಿಕರು ದುಃಖ ವ್ಯಕ್ತಪಡಿಸಿದ್ದರು. ಹಿಂದೆ ನೀಡಿದ್ದ ಆದೇಶವನ್ನು ವಾಪಸ್ ಪಡೆದಿರುವ ರಕ್ಷಣಾ ಸಚಿವಾಲಯ ಅಧಿಕಾರಿ ಶ್ರೇಣಿಯಿಂದ ಕೆಳಗೆ ಬರುವ ಹುತಾತ್ಮರ ಮಕ್ಕಳ ಶಿಕ್ಷಣದ ಎಲ್ಲ ಖರ್ಚನ್ನು ಭರಿಸುವುದಾಗಿ ಹೇಳಿದೆ.

ವಿಕಲಾಂಗ ಸೈನಿಕರು, ನಾಪತ್ತೆಯಾದ ಸೈನಿಕರು ಹಾಗೂ ಹೋರಾಟದಲ್ಲಿ ವೀರ ಮರಣವನ್ನಪ್ಪಿದ ಹುತಾತ್ಮ ಯೋಧರ ಮಕ್ಕಳು ಇದ್ರ ಲಾಭ ಪಡೆಯಲಿದ್ದಾರೆ. ಹಳೆ ಯೋಜನೆ ಬದಲಿಸುವ ನಿರ್ಧಾರವನ್ನು ಬಜೆಟ್ ನಲ್ಲಿಯೇ ಘೋಷಣೆ ಮಾಡಲಾಗಿತ್ತು.

ಈ ಹಿಂದೆ ಟ್ಯೂಷನ್ ಹಾಗೂ ಹಾಸ್ಟೆಲ್ ಶುಲ್ಕ ಪಾವತಿಯನ್ನು 10 ಸಾವಿರಕ್ಕೆ ಸೀಮಿತ ಮಾಡಲಾಗಿತ್ತು. ಇದ್ರಿಂದ ತುಂಬಾ ತೊಂದರೆಯಾಗ್ತಿದೆ ಎಂದು ಸೈನಿಕರು ರಕ್ಷಣಾ ಸಚಿವಾಲಯಕ್ಕೆ ಪತ್ರ ಬರೆದಿದ್ದರು.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...