alex Certify
ಕನ್ನಡ ದುನಿಯಾ       Mobile App
       

Kannada Duniya

ಪರೀಕ್ಷೆ ಒತ್ತಡ ಕಡಿಮೆ ಮಾಡಲಿದೆ ಮೋದಿ 24 ಮಂತ್ರ

ಪರೀಕ್ಷೆ ಹತ್ತಿರ ಬರ್ತಿದೆ. ಮಕ್ಕಳ ಜೊತೆ ಪಾಲಕರಿಗೂ ಟೆಕ್ಷನ್ ಶುರುವಾಗಿದೆ. ಪರೀಕ್ಷೆಯಲ್ಲಿ ಹೇಗೆ ಹೆಚ್ಚು ಅಂಕ ಪಡೆಯೋದು ಎಂಬ ಚಿಂತೆ ಮಕ್ಕಳು ಹಾಗೂ ಪಾಲಕರೆಲ್ಲರನ್ನೂ ಕಾಡ್ತಿದೆ.

ಮಕ್ಕಳು ಹಾಗೂ ಪಾಲಕರಿಗೆ ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಸರೆಯಾಗಿದ್ದಾರೆ. ಮೋದಿ ಮಂತ್ರ ಮಕ್ಕಳ ಪರೀಕ್ಷೆ ಒತ್ತಡವನ್ನು ಕಡಿಮೆ ಮಾಡಲಿದೆ. ಮೋದಿ ವಿದ್ಯಾರ್ಥಿಗಳಿಗಾಗಿ ಬರೆದಿರುವ ಪುಸ್ತಕ ಬಿಡುಗಡೆಯಾಗ್ತಿದೆ. ಎಗ್ಸಾಂ ವಾರಿಯರ್ಸ್ ಹೆಸರಿನ ಪುಸ್ತಕ ಇದಾಗಿದೆ.

ಪರೀಕ್ಷೆ ಒತ್ತಡ ಕಡಿಮೆ ಮಾಡಿಕೊಳ್ಳುವ ಬಗ್ಗೆ ವಿದ್ಯಾರ್ಥಿಗಳಿಗೆ ಸಲಹೆ ನೀಡಲಿದೆ. ಪುಸ್ತಕದಲ್ಲಿ ಒತ್ತಡ ಕಡಿಮೆ ಮಾಡಿಕೊಂಡು ಧನಾತ್ಮಕ ಚಿಂತನೆಯೊಂದಿಗೆ ಪರೀಕ್ಷೆ ಬರೆಯುವಂತೆ ಸಲಹೆ ನೀಡಲಾಗಿದೆ. ನಂಬರ್ ಹಿಂದೆ ಓಡಬೇಡಿ. ವಿದ್ಯಾಭ್ಯಾಸದ ಬಗ್ಗೆ ಸಂಪೂರ್ಣ ಗಮನ ಕೊಡಿ ಎಂದು ಮೋದಿ ಪುಸ್ತಕದಲ್ಲಿ ಹೇಳಿದ್ದಾರೆ.

24 ಮಂತ್ರಗಳ ಈ ಪುಸ್ತಕದಲ್ಲಿ ಮೋದಿ ಹಬ್ಬದ ರೀತಿಯಲ್ಲಿ ಪರೀಕ್ಷೆಯನ್ನು ಎಂಜಾಯ್ ಮಾಡಿ ಎಂದು ಸಲಹೆ ನೀಡಿದ್ದಾರೆ. ನಿಮ್ಮನ್ನು ನೀವು ಅರ್ಥ ಮಾಡಿಕೊಂಡು ನಿಮ್ಮ ಸಾಮರ್ಥ್ಯವನ್ನು ತಿಳಿದುಕೊಳ್ಳಿ. ಬೇರೆಯವರಿಗೆ ಮೋಸ ಮಾಡುವುದು ಬಹಳ ಸುಲಭ. ಆದರೆ ಅದು ನಿಮ್ಮನ್ನು ಕೈ ಹಿಡಿಯುವುದಿಲ್ಲ. ಸಮಯದ ಸದ್ಭಳಕೆ ಮಾಡಿಕೊಳ್ಳಿ ಎಂದು ಮೋದಿ ಪುಸ್ತಕದಲ್ಲಿ ಹೇಳಿದ್ದಾರೆ. ಪರೀಕ್ಷೆ ವೇಳೆ ವಿದ್ಯಾಭ್ಯಾಸ ಮಾಡುವ ಜೊತೆಗೆ ನಿದ್ರೆ ಹಾಗೂ ಸುತ್ತಾಟವನ್ನು ಬಿಡಬೇಡಿ. ಇದು ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಮೋದಿ ಸಲಹೆ ನೀಡಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...