alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವಂತ ಸಂಬಳದಲ್ಲಿ ಶಾಲೆ ನವೀಕರಿಸಿದ ಶಿಕ್ಷಣಾಧಿಕಾರಿ

ಉಪ ಶಿಕ್ಷಣಾಧಿಕಾರಿ ಗೀತಿಕಾ ಜೋಷಿ ಉತ್ತರಾಖಂಡ್‌ನ ಅಲ್ಮೋರಾ ಜಿಲ್ಲೆಯ ತರಿಕ್‌ಹೆಟ್ ಬ್ಲಾಕ್‌ನ ಪರ್ವತ ಪ್ರದೇಶದ ಶಾಲೆಯೊಂದರ ತಪಾಸಣೆಗಾಗಿ ತೆರಳಿದ್ದಾಗ ಅಲ್ಲಿನ ದುರವಸ್ಥೆ ಕಂಡು ಮರುಗಿದ್ದರು.

ಮಕ್ಕಳು ಅಲ್ಲಿ ಚಳಿಯಿಂದ ನಡುಗುತ್ತಿದ್ದರು. ಶಾಲಾ ಕೊಠಡಿಯ ಛಾವಣಿಯಿಂದ ಮಳೆ ನೀರು ಸೋರುತ್ತಿತ್ತು. ಅವರು ಕೇವಲ ಛಾವಣಿ ದುರಸ್ತಿ ಮಾಡಿಸಿದ್ದಲ್ಲ, ಇಡೀ ಶಾಲೆಯನ್ನು ತಮ್ಮ ವೇತನದಲ್ಲಿ ನವೀಕರಣಗೊಳಿಸಿದ್ದಾರೆ.

“ಶಾಲೆ ತೀರಾ ಶಿಥಿಲಾವಸ್ಥೆಯಲ್ಲಿತ್ತು. ಅಲ್ಲಿನ ಮಕ್ಕಳನ್ನು ಕಂಡಾಗ ನನ್ನದೇ ಮಕ್ಕಳಂತಾಯಿತು. ಆ ಕ್ಷಣವೇ ನನ್ನ ವೇತನದಲ್ಲೇ ದುರಸ್ತಿ ಮಾಡಿಸಲು ತೀರ್ಮಾನಿಸಿದೆ” ಎಂದು ಜೋಶಿ ಹೇಳುತ್ತಾರೆ. ಅವರು 2015ರ ಮಾರ್ಚ್‌ನಲ್ಲಷ್ಟೇ ಇಲ್ಲಿ ಉದ್ಯೋಗಕ್ಕೆ ಸೇರಿದ್ದರು. ಈಗ ಜಿಲ್ಲೆಯ ಇತರೆ ಶಾಲೆಗಳನ್ನು ರೂಪಾಂತರಗೊಳಿಸುವ ಮಿಶನ್ ಕೈಗೆತ್ತಿಕೊಂಡಿದ್ದಾರೆ ಅವರು.

“ಒಂದು ಶಾಲೆಯ ನವೀಕರಣದ ಬಳಿಕ ಯಾಕೆ ಈ ಪ್ರದೇಶದ ಬೇರೆ ಶಾಲೆಗಳಲ್ಲಿ ಈ ಕೆಲಸ ಮಾಡಬಾರದು ಎಂಬ ಆಲೋಚನೆ ನನಗೆ ಬಂತು. ಆಯಾ ಶಾಲೆಗಳ ಶಿಕ್ಷಕರ ಸಹಕಾರ ಪಡೆದೆ. ಶಿಕ್ಷಕರನ್ನು ಹುರಿದುಂಬಿಸಿದೆ. ಆರಂಭದಲ್ಲಿ ಶಿಕ್ಷಕರಿಂದ 2.5 ಲಕ್ಷ ರೂ. ಸಂಗ್ರಹಿಸಿದೆ ಮತ್ತು ಶಾಲಾ ಕಟ್ಟಡಗಳನ್ನು ನವೀಕರಿಸಿ ಅಗತ್ಯ ಮೂಲಸೌಕರ್ಯ ಒದಗಿಸಲು ಆರಂಭಿಸಿದೆವು” ಎಂದು ಗೀತಿಕಾ ಹೇಳುತ್ತಾರೆ.

ಐಎಎಸ್ ಅಧಿಕಾರಿಯೊಬ್ಬರ ಸಲಹೆ ಮೇರೆಗೆ ಶಾಸಕ ಹಾಗೂ ಉದ್ಯಮಿಯೊಬ್ಬರ ನೆರವು ಪಡೆದು ರೂಪಾಂತರಂ ಎಂಬ ಯೋಜನೆಯನ್ನು ಗೀತಿಕಾ ಆರಂಭಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...