alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಭಿಕ್ಷುಕಿಯರ ಹಿನ್ನಲೆ ಕೇಳಿದ ಪೊಲೀಸರಿಗೆ ಶಾಕ್…!

ಅಮೆರಿಕ ಅಧ್ಯಕ್ಷರ ಪುತ್ರಿ ಇವಾಂಕಾ ಟ್ರಂಪ್ ಭೇಟಿ ಹಿನ್ನೆಲೆಯಲ್ಲಿ ಹೈದ್ರಾಬಾದ್ ನಲ್ಲಿರೋ ಭಿಕ್ಷುಕರನ್ನೆಲ್ಲ ಹಿಡಿದು ಪೊಲೀಸರು ಪುನರ್ವಸತಿ ಕೇಂದ್ರಕ್ಕೆ ಕಳುಹಿಸುತ್ತಿದ್ದಾರೆ. ಈ ಪೈಕಿ ಇಬ್ಬರು ಭಿಕ್ಷುಕಿಯರ ಹಿನ್ನೆಲೆ ಮತ್ತು ಶ್ರೀಮಂತಿಕೆ ನೋಡಿ ಪೊಲೀಸರೇ ಅಚ್ಚರಿಪಟ್ಟಿದ್ದಾರೆ.

ಈ ಮಹಿಳೆಯರು ಇಂಗ್ಲಿಷ್ ನಲ್ಲಿಯೇ ಅಧಿಕಾರಿಗಳ ಜೊತೆ ವಾದ ಮಾಡ್ತಿರೋದನ್ನು ನೋಡಿ ಪೊಲೀಸರಿಗೆ ಕುತೂಹಲ ಮೂಡಿತ್ತು. ಅಸಲಿಗೆ ಅವರಿಬ್ಬರೂ ಶ್ರೀಮಂತರು ಮಾತ್ರವಲ್ಲ ವಿದ್ಯಾವಂತರು ಕೂಡ. 50 ವರ್ಷದ ಫರ್ಜೋನಾ ಸ್ನಾತಕೋತ್ತರ ಪದವೀಧರೆ.

ಲಂಡನ್ ನಲ್ಲಿ ಆರ್ಕಿಟೆಕ್ಟ್ ಆಗಿದ್ದ ಆಕೆ ಕೆಲ ವರ್ಷಗಳ ಹಿಂದಷ್ಟೇ ಭಾರತಕ್ಕೆ ಮರಳಿದ್ಲು. ಆಕೆಯ ಮಗ ಅಮೆರಿಕದಲ್ಲಿ ನೆಲೆಸಿದ್ದಾನೆ. ಕೆಲದಿನಗಳ ಹಿಂದಷ್ಟೇ ಅವಳ ಪತಿ ತೀರಿಕೊಂಡಿದ್ದ. ಆಗಿನಿಂದ್ಲೂ ಫರ್ಜೋನಾ ಮಾನಸಿಕ ಅಸ್ವಸ್ಥೆಯಾಗಿದ್ಲು. ದರ್ಗಾದಲ್ಲಿ ಭಿಕ್ಷೆ ಬೇಡಲು ಆರಂಭಿಸಿದ್ಲು.

ಕೊನೆಗೆ ಜೈಲು ಅಧಿಕಾರಿಗಳು ಆಕೆಯ ಪುತ್ರನಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಆತ ಭಾರತಕ್ಕೆ ಆಗಮಿಸಿದ್ದ. ತಾಯಿಯನ್ನು ಪೊಲೀಸರು ಅವನ ವಶಕ್ಕೆ ಒಪ್ಪಿಸಿದ್ದಾರೆ. ಇನ್ನೋರ್ವ ಮಹಿಳೆ ರಬಿಯಾ ಬಸೀರಾ ಕೂಡ ಅಮೆರಿಕದ ಗ್ರೀನ್ ಕಾರ್ಡ್ ಹೊಂದಿದ್ದಾಳಂತೆ.

ಆದ್ರೆ ರಬಿಯಾಳ ಸಹೋದರರು ಅವಳ ಆಸ್ತಿಯನ್ನೆಲ್ಲ ಕಬಳಿಸಿದ್ದರಿಂದ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಾಳೆ. ಮನಶಾಂತಿಗಾಗಿ ದರ್ಗಾದಲ್ಲಿ ಆಕೆ ಭಿಕ್ಷೆ ಬೇಡುತ್ತಿದ್ಲು. ಅವಳನ್ನು ಕೂಡ ಚೆರ್ಲಪಲ್ಲಿ ಜೈಲಿನಲ್ಲಿರುವ ಆನಂದ ಆಶ್ರಮದ ಅಧಿಕಾರಿಗಳು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...