alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಮಾಣವಚನ ಸ್ವೀಕರಿಸಿದ ಎಡಪ್ಪಾಡಿ ಪಳನಿಸ್ವಾಮಿ

edappadi-k-palanisamyತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಎಡಪ್ಪಾಡಿ ಕೆ. ಪಳನಿಸ್ವಾಮಿ ರಾಜಭವನದಲ್ಲಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಉಸ್ತುವಾರಿ ರಾಜ್ಯಪಾಲ ವಿದ್ಯಾಸಾಗರ ರಾವ್, ಎಡಪ್ಪಾಡಿ ಪಳನಿಸ್ವಾಮಿಯವರಿಗೆ ಪ್ರಮಾಣವಚನ ಬೋಧಿಸಿದ್ದಾರೆ.

ಪಳನಿಸ್ವಾಮಿಯವರೊಂದಿಗೆ 30 ಮಂದಿ ಶಾಸಕರು, ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದು, ಹಣಕಾಸು ಸೇರಿದಂತೆ ಹಲವು ಖಾತೆಗಳನ್ನು ಪಳನಿಸ್ವಾಮಿ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆನ್ನಲಾಗಿದೆ. ಜಯಲಲಿತಾ ಸಂಪುಟದಲ್ಲಿದ್ದ ಬಹುತೇಕ ಸಚಿವರಿಗೆ ಸ್ಥಾನ ನೀಡಲಾಗಿದ್ದು, ಈ ಹಿಂದೆ ನಿಭಾಯಿಸಿದ್ದ ಖಾತೆಗಳನ್ನೇ ಮುಂದುವರೆಸಲಾಗುತ್ತಿದೆ.

ಇದುವರೆಗೂ ರೆಸಾರ್ಟ್ ನಲ್ಲಿ ಬೀಡು ಬಿಟ್ಟಿದ್ದ ಶಾಸಕರು ಇಂದು ಹೊರ ಬಂದಿದ್ದು, ತಮಿಳುನಾಡಿನ ರಾಜಕೀಯ ಹೈಡ್ರಾಮಾಕ್ಕೆ ತೆರೆ ಬಿದ್ದಂತಾಗಿದೆ. ಇಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಎಡಪ್ಪಾಡಿ ಪಳನಿಸ್ವಾಮಿ, ನಾಳೆ ಬೆಂಗಳೂರಿಗೆ ಆಗಮಿಸಿ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ರನ್ನು ಭೇಟಿಯಾಗಲಿದ್ದಾರೆಂದು ಹೇಳಲಾಗಿದೆ. ಇನ್ನು 15 ದಿನಗಳೊಳಗಾಗಿ ಪಳನಿಸ್ವಾಮಿ ತಮಗಿರುವ ಬಹುಮತವನ್ನು ಸದನದಲ್ಲಿ ಸಾಬೀತುಪಡಿಸಬೇಕಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...