alex Certify
ಕನ್ನಡ ದುನಿಯಾ       Mobile App
       

Kannada Duniya

ಹೈಟೆಕ್ ವೇಶ್ಯಾವಾಟಿಕೆ ಅಡ್ಡೆಯಾಗುತ್ತಿದೆ ಈ ನಗರ

arrest-city

ಜನರ ಕೈಯಲ್ಲಿ ಹಣ ಹರಿದಾಡತೊಡಗಿದಂತೆ ಮೋಜು ಮಸ್ತಿ ಜಾಸ್ತಿಯಾಗುತ್ತದೆ. ಕೆಲವರಿಗಂತೂ ದುಡ್ಡಿದ್ದರೆ ಮಜಾ ಉಡಾಯಿಸಿಬಿಡಬೇಕೆಂಬ ಮನೋಭಾವ ಬೆಳೆಯುತ್ತದೆ. ಇಂತಹವರಿಗಾಗಿಯೇ ದಿಢೀರ್ ಆಗಿ ಕೆಲವು ಸೌಲಭ್ಯಗಳು ರೆಡಿಯಾಗಿಬಿಡುತ್ತವೆ.

ದೇಶದಲ್ಲಿನ ಹಿಂದುಳಿದ ರಾಜ್ಯಗಳಲ್ಲಿ ಒಂದಾಗಿರುವ ಛತ್ತೀಸ್ ಗಡದ ರಾಯ್ ಪುರದಲ್ಲಿ ಆರ್ಥಿಕ ಬೆಳವಣಿಗೆಗಳ ಕಾರಣದಿಂದಾಗಿ ಕೆಲವರು ದಿಢೀರ್ ಶ್ರೀಮಂತರಾಗಿದ್ದಾರೆ. ಇದರಿಂದ ಸಹಜವಾಗಿಯೇ ಕೆಲವರಿಗೆ ಮೋಜು ಮಸ್ತಿಯ ಮನೋಭಾವ ಬೆಳೆದಿದ್ದು, ಇದಕ್ಕೆ ಸಾಕ್ಷಿ ಎನ್ನುವಂತೆ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆಗಳು ತಲೆ ಎತ್ತಿವೆ. ರಾಯ್ ಪುರದಲ್ಲಿ ಸುಮಾರು 1 ಸಾವಿರಕ್ಕೂ ಅಧಿಕ ವೇಶ್ಯೆಯರಿದ್ದಾರೆ. ಬೇರೆ ಬೇರೆ ನಗರಗಳಿಂದಲೂ ಇಲ್ಲಿಗೆ ವೇಶ್ಯೆಯರು ಬಂದು ಹೋಗುತ್ತಾರೆ ಎಂದು ಹೇಳಲಾಗಿದೆ.

ಮುಂಬೈ ಸೇರಿದಂತೆ ವಿವಿಧ ನಗರಗಳಲ್ಲಿ ಡ್ಯಾನ್ಸ್ ಬಾರ್ ಮೇಲೆ ನಿರ್ಬಂಧ ಹೇರಿದ್ದರಿಂದ ಅವರಲ್ಲಿ ಬಹುತೇಕರು ರಾಯ್ ಪುರದತ್ತ ಮುಖಮಾಡಿದ್ದು, ಕೆಲವರು ಇಲ್ಲಿಗೆ ಬಂದು ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಮತ್ತೆ ಕೆಲವರು ಬಂದು ಹೋಗುವುದನ್ನು ಮಾಡುತ್ತಾರೆ. ಅಂದಾಜಿನ ಪ್ರಕಾರ ಇನ್ನೂರಕ್ಕೂ ಅಧಿಕ ವೇಶ್ಯೆಯರು ಇಲ್ಲಿಗೆ ಬಂದು ಹೋಗುತ್ತಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...