alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಿ ಪ್ಯಾಟ್ ಯಂತ್ರದಲ್ಲಿ ಇನ್ಮುಂದೆ ಕಾಣಿಸಿಕೊಳ್ಳಲ್ಲ ಸಮಸ್ಯೆ

ಚುನಾವಣೆಗಳಲ್ಲಿ ಬಳಸುವ ವಿವಿ ಪ್ಯಾಟ್ ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ತಾಂತ್ರಿಕ ಸಮಸ್ಯೆ ಪರಿಹಾರಕ್ಕೆ ಪರಿಹಾರ ಹುಡುಕಲಾಗಿದೆ.

ಎಲೆಕ್ಟ್ರಾನಿಕ್ ಮತ ಯಂತ್ರದಲ್ಲಿ ಮತದಾನ‌ ಮಾಡಿದ ಮರು‌ಕ್ಷಣವೇ ಮತದಾರನಿಗೆ ಮತದಾನ ಮಾಡಿದ್ದರ ಬಗ್ಗೆ ಮುದ್ರಣ ರೂಪದ ಖಾತ್ರಿ ನೀಡಲು ಜಾರಿಗೆ ತಂದ ವಿವಿಪ್ಯಾಟ್ ಸಾಧನದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಇದರಿಂದ ಎಲೆಕ್ಟ್ರಾನಿಕ್ ಓಟಿಂಗ್ ಮಷೀನ್ ಮೇಲೂ ಕೆಲವು ರಾಜಕೀಯ ಪಕ್ಷಗಳು ಅನುಮಾನ ವ್ಯಕ್ತಪಡಿಸುವಂತಾಗಿತ್ತು.

ಈ ಕಾರಣಕ್ಕೆ ಯಂತ್ರಗಳ ವೈಫಲ್ಯ ತಡೆಯಲು ಸಣ್ಣ ಬದಲಾವಣೆಗೆ ಚುನಾವಣೆ ಆಯೋಗ ನಿರ್ಧರಿಸಿದೆ.

ತೇವಾಂಶದ ಕಾರಣಕ್ಕೆ ವಿವಿಪ್ಯಾಟ್ ನಲ್ಲಿ ಮುದ್ರಣಕ್ಕೆ ತಡೆಯಾಗುತ್ತಿತ್ತು. ಈಗ ಮಾಡಿರುವ ಬದಲಾವಣೆಯಿಂದ ವಾತಾವರಣದ ಆರ್ದ್ರತೆ ಯಂತ್ರದಲ್ಲಿ ಬಳಸುವ ಪೇಪರ್ ರೋಲ್ ಮೇಲೆ ಪರಿಣಾಮ ಬೀರದು ಎಂದು ಚುನಾವಣಾ ಆಯೋಗ ಹೇಳಿದೆ.

ಪದೇಪದೆ ಎದುರಾಗುತ್ತಿದ್ದ ತಾಂತ್ರಿಕ ಸಮಸ್ಯೆ ಹಿನ್ನೆಲೆ ಎರಡು ಲೋಕಸಭೆ ಕ್ಷೇತ್ರದ ಮತ್ತು ಹತ್ತು ವಿಧಾನಸಭೆ ಚುನಾವಣೆ ವೇಳೆ ಆಯೋಗದ ತಾಂತ್ರಿಕ ತಜ್ಞರ ಸಮಿತಿ ವಿಶ್ಲೇಷಣೆ ಮಾಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...