alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್-ವಾಟ್ಸಾಪ್ ನಲ್ಲಿ ಆದಾಯ ಗಳಿಸಲು ತರಬೇತಿ ನೀಡ್ತಿದೆ ಸರ್ಕಾರ

ವಾಟ್ಸಾಪ್ ಆ್ಯಪ್, ಫೇಸ್ಬುಕ್ ಆ್ಯಪ್ ಎಲ್ಲರ ಫೋನ್ ನಲ್ಲಿಯೂ ಈಗ ಕಾಮನ್. ಅರ್ಧ ಗಂಟೆಗೊಮ್ಮೆ ಕೆಲವರು ವಾಟ್ಸಾಪ್ ನೋಡಿದ್ರೆ ಮತ್ತೆ ಕೆಲವರು ಒಂದು ಗಂಟೆಯೊಳಗೆ ಮೂರ್ನಾಲ್ಕು ಬಾರಿ ಫೋನ್ ಚೆಕ್ ಮಾಡ್ತಾರೆ. ಸುಮ್ನೆ ಫೋಟೋ, ಚಾಟ್ ಅಂತಾ ಟೈಂ ಪಾಸ್ ಮಾಡುವ ಬದಲು ಫುಲ್ ಟೈಂ ಅಥವಾ ಪಾರ್ಟ್ ಟೈಂನಲ್ಲಿ ಈ ಸಾಮಾಜಿಕ ಜಾಲತಾಣದಲ್ಲಿ ಹಣ ಗಳಿಸಬಹುದು.

2018-2019 ರಲ್ಲಿ ಸಾಮಾಜಿಕ ಜಾಲತಾಣದಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗ ಪಡೆಯುತ್ತಾರೆಂದು ಕೇಂದ್ರ ಸರ್ಕಾರ ಹೇಳ್ತಿದೆ. ಅಷ್ಟೇ ಅಲ್ಲ ಈ ಬಗ್ಗೆ ತರಬೇತಿ ನೀಡ್ತಿದೆ. ಉದ್ಯೋಗಿಗಳು ನೀವಾಗಿದ್ದರೆ ಚಿಂತೆ ಮಾಡಬೇಕಾಗಿಲ್ಲ. ಕೇಂದ್ರ ಸರ್ಕಾರ ರಜಾ ದಿನ ಅಂದ್ರೆ ಶನಿವಾರ-ಭಾನುವಾರ ತರಬೇತಿ ನೀಡ್ತಿದೆ.

ಸರ್ಕಾರ ಈ ಜವಾಬ್ದಾರಿಯನ್ನು NIESBUD ಗೆ ನೀಡಿದೆ. NIESBUD ಅನೇಕ ವರ್ಷಗಳಿಂದ ಈ ಕ್ಷೇತ್ರದಲ್ಲಿ ತರಬೇತಿ ನೀಡುತ್ತ ಬಂದಿದೆ. ಏಪ್ರಿಲ್ 21 ಮತ್ತು 22 ಕ್ಕೆ NIESBUD ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ತರಬೇತಿಯಲ್ಲಿ ಸಾಮಾಜಿಕ ಜಾಲತಾಣದ ಮಾರ್ಕೆಟಿಂಗ್ ಬಗ್ಗೆ ತರಬೇತಿ ನೀಡಲಾಗಿದೆ.

ಈ ಪ್ರೋಗ್ರಾಂ ಅಡಿಯಲ್ಲಿ ಸಾಮಾಜಿಕ ಜಾಲತಾಣ, ಫೇಸ್ಬುಕ್, ವಾಟ್ಸಾಪ್, ಯುಟ್ಯೂಬ್ ನಲ್ಲಿ ಮಾರ್ಕೆಟಿಂಗ್ ಹೇಗೆ ಮಾಡಬೇಕು? ಆದಾಯ ಹೇಗೆ ಗಳಿಸಬೇಕು ಎನ್ನುವ ಬಗ್ಗೆ ಮಾಹಿತಿ ನೀಡಲಾಗುತ್ತದೆ. ವಿದ್ಯಾರ್ಥಿಗಳಿಂದ ಹಿಡಿದು ಉದ್ಯೋಗಿಗಳವರೆಗೆ ಎಲ್ಲರೂ ಈ ತರಬೇತಿ ಪಡೆಯಬಹುದಾಗಿದೆ. ಇದಕ್ಕೆ 6000 ರೂಪಾಯಿ ನೀಡಬೇಕು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...