alex Certify
ಕನ್ನಡ ದುನಿಯಾ       Mobile App
       

Kannada Duniya

ಐಸ್ ಪ್ರಿಯರಿಗೊಂದು ಶಾಕಿಂಗ್ ಸುದ್ದಿ

ice golaಬೀದಿ ಬದಿಯಲ್ಲಿ ಅಥವಾ ಹೋಟೆಲ್ ಗಳಲ್ಲಿ ಜ್ಯೂಸ್ ಕುಡಿಯುವಾಗ ಐಸ್ ಹಾಕಿಕೊಂಡರೇನೇ ಹಲವರಿಗೆ ಸಮಾಧಾನ. ಆದರಲ್ಲೂ ಬೇಸಿಗೆಯಲ್ಲಿ ತಂಪು ಪಾನೀಯ ಕುಡಿಯುವಾಗ ಅದಕ್ಕೆ ಐಸ್ ಹಾಕಿದರೆ ಅದರ ಸ್ವಾದವೇ ಬೇರೆ. ಆದರೆ ಇಂತಹ ಐಸ್ ಕುರಿತು ಆತಂಕಕಾರಿ ಮಾಹಿತಿಯೊಂದು ಹೊರ ಬಿದ್ದಿದೆ.

ಬೃಹನ್ಮುಂಬಯಿ ಮಹಾನಗರ ಪಾಲಿಕೆ ಅಲ್ಲಿನ ರೆಸ್ಟೋರೆಂಟ್ ಗಳು, ಜ್ಯೂಸ್ ಅಂಗಡಿ, ಬೀದಿ ಬದಿ ಐಸ್ ಮಾರಾಟ ಮಾಡುವವರಿಂದ ಸಂಗ್ರಹಿಸಿದ್ದ ಮಾದರಿಗಳನ್ನು ಪರೀಕ್ಷೆಗೊಳಪಡಿಸಿದ ವೇಳೆ ಶೇ. 92 ರಷ್ಟು ಐಸ್ ನಲ್ಲಿ ಆರೋಗ್ಯಕ್ಕೆ ಮಾರಕವಾದ E. coli ಬ್ಯಾಕ್ಟೀರಿಯಾ ಪತ್ತೆಯಾಗಿದೆ.

ಇಂತಹ ಐಸ್ ಸೇವಿಸಿದವರು ಗ್ಯಾಸ್ಟ್ರಿಕ್, ಡಯೇರಿಯಾ, ವಾಂತಿ, ಫುಡ್ ಪಾಯಿಸನಿಂಗ್ ಸೇರಿದಂತೆ ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ಐಸ್ ತಯಾರಿಕೆಗೆ ಅಶುದ್ದ ನೀರು ಬಳಸುತ್ತಿರುವುದೇ E. coli ಬ್ಯಾಕ್ಟೀರಿಯಾ ಕಂಡು ಬರಲು ಕಾರಣವೆನ್ನಲಾಗಿದೆ. ಮುಂಬೈ ಮಾತ್ರವಲ್ಲ ದೇಶದ ಎಲ್ಲೆಡೆ ಬಹುತೇಕರು ಐಸ್ ತಯಾರಿಕೆಗೆ ಅಶುದ್ದ ನೀರನ್ನು ಬಳಸುತ್ತಿದ್ದು, ಇಂತಹ ಐಸ್ ಸೇವಿಸಿದ ವೇಳೆ ಅನಾರೋಗ್ಯ ಕಾಣಿಸಿಕೊಳ್ಳುವುದು ನಿಶ್ಚಿತವೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...