alex Certify
ಕನ್ನಡ ದುನಿಯಾ       Mobile App
       

Kannada Duniya

ಐಜಿಐ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಇನ್ಮುಂದೆ ಸಿಗಲಿದೆ ಈ ಸೌಲಭ್ಯ

ಡಿಜಿಟಲ್ ಪ್ರಯಾಣದ ಅಡಿಯಲ್ಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೀಘ್ರವೇ ಇ-ಬೋರ್ಡಿಂಗ್ ವ್ಯವಸ್ಥೆ ಶುರುವಾಗಲಿದೆ. ಐಜಿಐ ನಲ್ಲಿ ಇ-ಬೋರ್ಡಿಂಗ್ ವ್ಯವಸ್ಥೆ ಜಾರಿಗೆ ಬಂದ್ರೆ ವಿಮಾನ ನಿಲ್ದಾಣ ಸಿಬ್ಬಂದಿ ಹಾಗೂ ಪ್ರಯಾಣಿಕರ ಮಧ್ಯೆ ನಡೆಯುವ ಅನವಶ್ಯಕ ಮಾತುಕತೆಗೆ ತೆರೆ ಬೀಳಲಿದೆ.

ಇ-ಬೋರ್ಡಿಂಗ್ ನಿಂದಾಗಿ ವಿಮಾನ ನಿಲ್ದಾಣದಲ್ಲಿ ನಡೆಯುವ ಭದ್ರತಾ ಚೆಕ್ಕಿಂಗ್ ಹಾಗೂ ಬೋರ್ಡಿಂಗ್ ಪ್ರಕ್ರಿಯೆಗೆ ಹಿಡಿಯುತ್ತಿದ್ದ ಸಮಯ ಕಡಿಮೆಯಾಗಲಿದೆ. ಭದ್ರತಾ ತಪಾಸಣೆಗಾಗಿ ನಿಲ್ಲುತ್ತಿದ್ದ ದೊಡ್ಡ ದೊಡ್ಡ ಸಾಲು ಕಡಿಮೆಯಾಗಲಿದೆ ಎಂದು ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಆಗಸ್ಟ್ ಮೊದಲ ವಾರದಲ್ಲಿ ಇ-ಬೋರ್ಡಿಂಗ್ ಸಿಸ್ಟಂನ ಪ್ರಯೋಗ ಶುರುವಾಗಲಿದೆ. ಪ್ರಯೋಗದ ವೇಳೆ ಸಿಸ್ಟಂನ ಸಮಸ್ಯೆ ಅಥವಾ ಕೊರತೆ ಗೊತ್ತಾಗಲಿದೆ. ಅದನ್ನು ಸರಿಪಡಿಸಿ ನಂತ್ರ ಪೂರ್ಣ ಪ್ರಮಾಣದಲ್ಲಿ ಇ-ಬೋರ್ಡಿಂಗ್ ಜಾರಿಗೆ ತರಲಾಗುವುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...