alex Certify
ಕನ್ನಡ ದುನಿಯಾ       Mobile App
       

Kannada Duniya

ಆಲದ ಮರಕ್ಕೆ ಹಾಕಲಾಗಿದೆ ಡ್ರಿಪ್ಸ್…!

ಎಲ್ಲೆಡೆ ಹಸಿರು ನಾಶವಾಗುತ್ತಿದೆ. ಆದರೆ ಈ ಹಸಿರನ್ನೇ ರಕ್ಷಿಸುವ ಅಪರೂಪದ ಕಾರ್ಯವೊಂದು ತೆಲಂಗಾಣದಲ್ಲಿ ನಡೆದಿದೆ. ಗೆದ್ದಲು ಹಿಡಿದು ಸಾವಿಗೀಡಾಗುತ್ತಿದ್ದ 700 ವರ್ಷಗಳ ಹಳೆಯದಾದ ಆಲದ ಮರವೊಂದಕ್ಕೆ ಡ್ರಿಪ್ ನೀಡಿ ಬದುಕುಳಿಸುವ ಪ್ರಯತ್ನವೊಂದು ತೆಲಂಗಾಣದಲ್ಲಿ ನಡೆದಿದೆ.

ಇಲ್ಲಿನ ಮೆಹಬೂಬ ನಗರದಲ್ಲಿರುವ ಈ ಆಲದ ಮರ, ಜಗತ್ತಿನಲ್ಲಿಯೇ ಎರಡನೆಯ ಅತಿದೊಡ್ಡ ಆಲದ ಮರವೆಂದು ಖ್ಯಾತಿ ಗಳಿಸಿದೆ. ಆದರೆ ಇತ್ತೀಚಿಗೆ ಈ ಪ್ರಸಿದ್ಧ ಹಳೆಯ ಆಲದ ಮರದ ಕೆಲ ಭಾಗ ಗೆದ್ದಲು ಹಿಡಿದು ಮರ ಸಾಯುವಂತಾಗಿತ್ತು.

ಇದರಿಂದ ಎಚ್ಚೆತ್ತ ಅಧಿಕಾರಿಗಳು ಮರವನ್ನು ರಕ್ಷಿಸಲು ಮೊದಲು ಹುಳುಗಳಿದ್ದ ಜಾಗಕ್ಕೆ ರಾಸಾಯನಿಕಗಳನ್ನು ಹಾಕಿದರೆ ಅದು ಪ್ರಯೋಜನವಾಗಲಿಲ್ಲ. ಬಳಿಕ ಗೆದ್ದಲು ಹುಳಗಳನ್ನು ಸಾಯಿಸುವಂಥ ಕೆಮಿಕಲ್ ಡ್ರಿಪ್ ಗಳನ್ನು ಮರಕ್ಕೆ ಕಟ್ಟಿದ್ದಾರೆ. ಪ್ರತಿ 2 ಮೀಟರ್ ಗಳಿಗೆ ಈ ಡ್ರಿಪ್ ನೀಡಲಾಗುತ್ತಿದ್ದು, ಮರ ಮತ್ತೆ ಆರೋಗ್ಯಯುತವಾಗಿ ಚಿಗುರುವ ಭರವಸೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...