alex Certify
ಕನ್ನಡ ದುನಿಯಾ       Mobile App
       

Kannada Duniya

ಅಧಿವೇಶನಕ್ಕೆ ಟ್ರಾಕ್ಟರ್ ನಲ್ಲಿ ಬಂದ ಸಂಸದ…!

ಸಂಸತ್ತಿನ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಹಿಸ್ಸಾರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಭಾರತೀಯ ರಾಷ್ಟ್ರೀಯ ಲೋಕದಳದ ಸಂಸದ ದುಷ್ಯಂತ್ ಚೌತಾಲ ಅಧಿವೇಶನಕ್ಕೆ ಟ್ರಾಕ್ಟರ್ ನಲ್ಲಿ ಆಗಮಿಸಿದ್ದಾರೆ.

ತಮ್ಮ ಇಬ್ಬರು ಸಹವರ್ತಿಗಳ ಜೊತೆ ಹಸಿರು ಬಣ್ಣದ ಟ್ರಾಕ್ಟರ್ ನಲ್ಲಿ ದುಷ್ಯಂತ್ ಚೌತಾಲ ಆಗಮಿಸಿದ್ದು, ಪೊಲೀಸರು ಟ್ರಾಕ್ಟರ್ ವಶಕ್ಕೆ ಪಡೆದು ಅವರಿಗೆ 2 ಸಾವಿರ ರೂ. ದಂಡ ವಿಧಿಸುವ ಸಾಧ್ಯತೆಯಿದೆ.

ಈ ಹಿಂದೆಯೇ ನಡೆಯಬೇಕಾಗಿದ್ದ ಸಂಸತ್ ಅಧಿವೇಶನ ಹಿಮಾಚಲ ಪ್ರದೇಶ ಹಾಗೂ ಗುಜರಾತ್ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಇಂದಿನಿಂದ ಆರಂಭವಾಗಿದ್ದು, ಮೊದಲಿಗೆ ಪ್ರಧಾನಿ ಮೋದಿ ತಮ್ಮ ಸಚಿವ ಸಂಪುಟದ ನೂತನ ಸಚಿವರನ್ನು ಸದನಕ್ಕೆ ಪರಿಚಯಿಸಿದ್ದಾರೆ.

ಈ ಬಾರಿಯ ಅಧಿವೇಶನದಲ್ಲಿ ಜಿ.ಎಸ್.ಟಿ. ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಜ್ಜಾಗಿದ್ದು, ಇದನ್ನು ಸಮರ್ಥವಾಗಿ ಎದುರಿಸಲು ಆಡಳಿತ ಪಕ್ಷ ಕೂಡಾ ಸಿದ್ದವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...