alex Certify
ಕನ್ನಡ ದುನಿಯಾ       Mobile App
       

Kannada Duniya

ಮಿದುಳು ಸರ್ಜರಿ ಯಶಸ್ವಿಯಾಗಲು ನೆರವಾದ ರೋಗಿ, ಹೇಗೆ ಗೊತ್ತಾ?

ಬಿಹಾರದಲ್ಲಿ ಮೊದಲ ಬಾರಿಗೆ ಯುವಕನೊಬ್ಬನಿಗೆ ಕೇವಲ ಸ್ಥಳೀಯ ಅರಿವಳಿಕೆ ನೀಡಿ ಯಶಸ್ವಿಯಾಗಿ ಮಿದುಳಿನಿಂದ ಗಡ್ಡೆಯನ್ನು ತೆಗೆಯಲಾಗಿದೆ. ಪಾಟ್ನಾದ ಏಮ್ಸ್ ನಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿದೆ.

ಮುಜಾಫರ್‌ಪುರದ 21ರ ಹರೆಯದ ರೋಹಿತ್ ಕುಮಾರ್ ಎಂಬ ಯುವಕ ತೀವ್ರ ತಲೆನೋವು ಮತ್ತು ಫಿಟ್ಸ್ ಸಮಸ್ಯೆಗೆ ಚಿಕಿತ್ಸೆಗಾಗಿ ಏಮ್ಸ್ ಪಾಟ್ನಾಗೆ ದಾಖಲಾಗಿದ್ದ. ಎಂಆರ್‌ಐ ಮಾಡಿಸಿದಾಗ ಮಿದುಳಲ್ಲಿ ಐದು ಸೆಂಮೀ ವ್ಯಾಸದ ಗಡ್ಡೆ ಕಂಡುಬಂತು. ಅದನ್ನು ತೆಗೆಯಲು ಸೆ.21ರಂದು ಶಸ್ತ್ರಚಿಕಿತ್ಸೆ ನಡೆಸಲಾಯಿತು.

“ಗಡ್ಡೆ ತೆಗೆಯಲು ನಮಗೆ ನಾಲ್ಕು ಗಂಟೆಗಳು ಬೇಕಾಯಿತು. ರೋಗಿ ತುಂಬಾ ಉತ್ತಮ ಪ್ರಗತಿ ತೋರಿಸುತ್ತಿದ್ದಾನೆ. ಇನ್ನೊಂದೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಆತನನ್ನು ಬಿಡುಗಡೆಗೊಳಿಸಲಿದ್ದೇವೆ” ಎಂದು ನ್ಯೂರೋಸರ್ಜರಿ ವಿಭಾಗದ ಪ್ರೊಫೆಸರ್ ಸಕೀಬ್ ಸಿದ್ದಿಕಿ ಹೇಳಿದ್ದಾರೆ.

“ಸರ್ಜರಿ ನಡೆಸುವ ವೇಳೆ ರೋಗಿಯನ್ನು ಎಚ್ಚರದಲ್ಲಿ ಇರಿಸಬೇಕಿತ್ತು. ಅದಕ್ಕಾಗಿ ಸ್ಥಳೀಯ ಅರಿವಳಿಕೆ ನೀಡಲು ನಾವು ನಿರ್ಧರಿಸಿದೆವು. ರೋಗಿಯ ಮಟ್ಟಿಗೆ ಸುರಕ್ಷಿತವಾದರೂ ಈ ರೀತಿಯ ಶಸ್ತ್ರಚಿಕಿತ್ಸೆ ನಡೆಸಲು ತುಂಬಾ ಉನ್ನತ ಕೌಶಲ್ಯ ಬೇಕಾಗುತ್ತದೆ. ಶಸ್ತ್ರಚಿಕಿತ್ಸೆಯುದ್ದಕ್ಕೂ ವೈದ್ಯರು ರೋಗಿಯೊಂದಿಗೆ ಮಾತನಾಡುತ್ತಿದ್ದರು.

ಬಲ ತೋಳು ಮತ್ತು ಕಾಲಿನಲ್ಲಿ ನಿಶಕ್ತಿ, ಜೋಮಿನ ಅನುಭವವಾಗುತ್ತಿದೆಯೇ ಎಂದು ಕೇಳುತ್ತಿದ್ದೆವು. ಆತ ಪ್ರತಿಕ್ರಿಯೆ ನೀಡುತ್ತಿದ್ದ. ಇದು ಸರಿಯಾದ ದಿಕ್ಕಿನಲ್ಲಿ ಶಸ್ತ್ರಚಿಕಿತ್ಸೆ ನಡೆಸಲು ಅನುಕೂಲವಾಯಿತು. ಒಂದು ವೇಳೆ ನಿಶಕ್ತಿಯ ಉತ್ತರ ನೀಡುತ್ತಿದ್ದರೆ, ಶಸ್ತ್ರಚಿಕಿತ್ಸೆ ನಿಲ್ಲಿಸುತ್ತಿದ್ದೆವು” ಎಂದು ಡಾ.ಸಿದ್ದಿಕಿ ವಿವರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...