alex Certify
ಕನ್ನಡ ದುನಿಯಾ       Mobile App
       

Kannada Duniya

ಭಕ್ತರನ್ನು ಸೆಳೆಯುತ್ತಿದೆ ಬಾಹುಬಲಿಯ ದುರ್ಗಾ ಪೆಂಡಾಲ್

ಈ ವರ್ಷ ಕೋಲ್ಕತ್ತಾದ ದುರ್ಗಾ ಪೂಜೆಯಲ್ಲಿ ಬಾಹುಬಲಿಯೂ ಸದ್ದು ಮಾಡ್ತಿದೆ. ಬಾಹುಬಲಿ ಥೀಮ್ ನ ದುರ್ಗಾ ಪೆಂಡಾಲ್ ಸಿದ್ಧಪಡಿಸಲಾಗಿದೆ. ಬಾಹುಬಲಿಯಲ್ಲಿ ಚಿತ್ರಿಸಿದ ಪ್ರಾಚೀನ ಸಾಮ್ರಾಜ್ಯ ಮಾಹಿಶ್ಮತಿ ಅರಮನೆಯನ್ನು ರಚಿಸಲಾಗಿದೆ. ಈ ಮೂಲಕ ಶ್ರೀಭೂಮಿ ಸ್ಪೋರ್ಟಿಂಗ್ ಕ್ಲಬ್ ಭಕ್ತರನ್ನು ಸೆಳೆಯುತ್ತಿದೆ.

‘ಬಾಹುಬಲಿ 2 ಚಿತ್ರ’ ಅಭೂತಪೂರ್ವ ಯಶಸ್ಸು ಕಂಡಿತ್ತು. ಹಾಗಾಗಿ ಅದೇ ಥೀಮ್ ಅನ್ನು ದುರ್ಗಾ ಪೆಂಡಾಲ್ ಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ದುರ್ಗೆ ಕೂಡ ಶಕ್ತಿಯ ಸಂಕೇತ. ಹಾಗಾಗಿ ಬಾಹುಬಲಿ ಥೀಮ್ ದುರ್ಗಾ ಪೂಜೆಗೆ ಸೂಕ್ತ ಅನ್ನೋದು ಆಯೋಜಕರ ಅಭಿಪ್ರಾಯ.

ಪೆಂಡಾಲ್ ಗೆ ಬೃಹತ್ ದ್ವಾರ ನಿರ್ಮಿಸಲಾಗಿದ್ದು, ಎರಡೂ ಬದಿಯಲ್ಲಿ ಆನೆಗಳನ್ನು ಚಿತ್ರಿಸಲಾಗಿದೆ. ಅದರ ತಲೆಮೇಲೆ ಅಮರೇಂದ್ರ ಬಾಹುಬಲಿಯಿದ್ದಾನೆ. ಆನೆಗಳಿಗೆ ಎಲ್ ಇ ಡಿ ಲೈಟ್ ಗಳನ್ನು ಅಳವಡಿಸಿರೋದ್ರಿಂದ ಪೆಂಡಾಲ್ ಸಂಪೂರ್ಣ ಜಗಮಗಿಸುತ್ತಿದೆ.

ಬಾಹುಬಲಿ ಚಿತ್ರದ ನಾಲ್ಕು ದೃಶ್ಯಗಳನ್ನು ಯಥಾವತ್ತಾಗಿ ಚಿತ್ರಿಸಲಾಗಿದೆ. ಶಿವಗಾಮಿ ಬಾಹುಬಲಿಯನ್ನು ನೀರಲ್ಲಿ ಎತ್ತಿಕೊಂಡಿರುವ ದೃಶ್ಯ, ಅಮರೇಂದ್ರ-ದೇವಸೇನಾ ಬಿಲ್ವಿದ್ಯೆ ತರಬೇತಿ, ಮಹೇಂದ್ರ ಶಿವಲಿಂಗ ಎತ್ತಿರುವುದು ಮತ್ತು ಮದವೇರಿದ ಎತ್ತುಗಳನ್ನು ಬಾಹುಬಲಿ ಮಣಿಸುತ್ತಿರುವ ದೃಶ್ಯ ಕಣ್ಣಿಗೆ ಕಟ್ಟುವಂತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...