alex Certify
ಕನ್ನಡ ದುನಿಯಾ       Mobile App
       

Kannada Duniya

ಆಧಾರ್ ಲಿಂಕ್ ನೆಪದಲ್ಲಿ ನಿಮಗೂ ಆಗಬಹುದು ಇಂಥದ್ದೇ ಮೋಸ

ಬ್ಯಾಂಕ್ ಖಾತೆ, ಪಾನ್ ನಂಬರ್, ಮೊಬೈಲ್ ನಂಬರ್ ಹೀಗೆ ಎಲ್ಲದಕ್ಕೂ ಈಗ ಆಧಾರ್ ಲಿಂಕ್ ಮಾಡಲೇಬೇಕು. ಮುಂಬೈನ ಶಾಶ್ವತ್ ಗುಪ್ತಾ ಎಂಬ ಯುವಕನಿಗೆ ಇದರಲ್ಲೂ ಮೋಸವಾಗಿದೆ. ಫೋನ್ ನಂಬರ್ ಅನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಲು ಹೋಗಿ ಶಾಶ್ವತ್ 1.3 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ.

ಈ ಬಗ್ಗೆ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿರೋ ಶಾಶ್ವತ್, ಇಂತಹ ಮೋಸ ಯಾರಿಗೆ ಬೇಕಾದ್ರೂ ಆಗಬಹುದು ಅಂತಾ ಎಚ್ಚರಿಸಿದ್ದಾನೆ. ಏರ್ಟೆಲ್ ಸಿಬ್ಬಂದಿ ಅಂತಾ ಹೇಳಿಕೊಂಡು ವಂಚಕರು ಶಾಶ್ವತ್ ಗೆ ಕರೆ ಮಾಡಿದ್ರು. ಇಂತಿಷ್ಟು ದಿನದಲ್ಲಿ ನಿಮ್ಮ ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಮಾಡದೇ ಇದ್ರೆ ಸಿಮ್ ಬ್ಲಾಕ್ ಮಾಡೋದಾಗಿ ಎಚ್ಚರಿಸಿದ್ರು.

ಕೊನೆಗೆ ನಿಮ್ಮ ಸಿಮ್ ನಂಬರ್ ಅನ್ನು 121ಗೆ ಮೆಸೇಜ್ ಮಾಡಿ ಅಂತಾ ಆ ವಂಚಕ ಸೂಚಿಸಿದ್ದಾನೆ. ಅದನ್ನು ನಂಬಿದ ಶಾಶ್ವತ್ ಮೆಸೇಜ್ ಕಳಿಸಿದ್ರು. ಕೂಡಲೇ ಶಾಶ್ವತ್ ಗುಪ್ತಾನ ಸಿಮ್ ಕಾರ್ಡ್ ಹ್ಯಾಕ್ ಮಾಡಿದ ವಂಚಕರು ಆತನ ಐಸಿಐಸಿಐ ಬ್ಯಾಂಕ್ ಖಾತೆಯಲ್ಲಿದ್ದ 1.3 ಲಕ್ಷ ಹಣವನ್ನು ಲೂಟಿ ಮಾಡಿದ್ದಾರೆ.

ಕೇವಲ ಶಾಶ್ವತ್ ಗೆ ಮಾತ್ರವಲ್ಲ ಇಂತಹ ಮೋಸ ನಿಮಗೂ ಆಗಬಹುದು. ಹಾಗಾಗಿ ಇಂತಹ ಫೋನ್ ಕರೆಗಳ ಬಗ್ಗೆ ಎಚ್ಚರದಿಂದಿರಿ. ಅನಧಿಕೃತ ಮಳಿಗೆಗಳಲ್ಲಿ, ಡೀಲರ್ ಗಳ ಬಳಿ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಬೇಡಿ.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...