alex Certify
ಕನ್ನಡ ದುನಿಯಾ       Mobile App
       

Kannada Duniya

ಶುಲ್ಕ ಕಟ್ಟದ ಮಕ್ಕಳಿಗೆ ಅಮಾನವೀಯ ಶಿಕ್ಷೆ…!

ಭಾರತದಲ್ಲಿ ಎಲ್ಲರಿಗೂ ಉತ್ತಮ ಗುಣಮಟ್ಟದ ಉಚಿತ ಶಿಕ್ಷಣ ನೀಡಬೇಕೆಂಬ ಒತ್ತಾಯ ಕೇಳಿ ಬರುತ್ತಿರುವ ಮಧ್ಯೆ ಸಕಾಲಕ್ಕೆ ಶಾಲಾ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳಿಬ್ಬರನ್ನು ತರಗತಿಯಿಂದ ಹೊರ ಕಳುಹಿಸಿದ ಘಟನೆ ನಡೆದಿದೆ.

ಹೈದರಾಬಾದ್ ಸಮೀಪದ ಉಪ್ಪಾಲ್ ನ ಗ್ಲೋಬಲ್ ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ರಮೇಶ್ ಯಾದವ್ ಎಂಬ ರೈತನ ಮೂವರು ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಈ ಪೈಕಿ 4 ಮತ್ತು 6 ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ತರಗತಿಯಿಂದ ಹೊರ ಕಳುಹಿಸಿ ಲೈಬ್ರರಿಯಲ್ಲಿ ಕೂರಿಸಲಾಗಿತ್ತೆನ್ನಲಾಗಿದೆ.

ರಮೇಶ್ ಯಾದವ್ ತನ್ನ ಮೂವರು ಮಕ್ಕಳ ಶಾಲಾ ಶುಲ್ಕವಾಗಿ ಪ್ರತಿ ವರ್ಷ ನಾಲ್ಕು ಲಕ್ಷ ರೂ. ಗಳನ್ನು ಪಾವತಿಸುತ್ತಿದ್ದು, ಈ ಪೈಕಿ 80,000 ರೂ. ಬಾಕಿ ಇತ್ತು ಎನ್ನಲಾಗಿದೆ. ಇದನ್ನು ಪಾವತಿಸಲು ಕೊಂಚ ಕಾಲಾವಕಾಶ ಬೇಕೆಂದು ಕೇಳಿಕೊಂಡರೂ ಶಾಲಾ ಆಡಳಿತ ಮಂಡಳಿ ಅಮಾನವೀಯವಾಗಿ ವರ್ತಿಸಿದೆ. ಕಡೆಗೆ ರಮೇಶ್ ಯಾದವ್ ಅಧಿಕಾರಿಗಳ ಮೊರೆ ಹೋಗಿದ್ದು, ಬಳಿಕ ಮಕ್ಕಳ ಹಾಜರಾತಿಗೆ ಅನುವು ಮಾಡಿಕೊಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...