alex Certify
ಕನ್ನಡ ದುನಿಯಾ       Mobile App
       

Kannada Duniya

ಶೌಚಾಲಯವಿಲ್ಲದ ಕಾರಣ ಗಂಡನ ಮನೆ ಬಿಡುವ ನಿರ್ಧಾರಕ್ಕೆ ಬಂದ್ಲು ವಧು

ಉತ್ತರ ಪ್ರದೇಶದಲ್ಲಿ ಟಾಯ್ಲೆಟ್ ಏಕ್ ಪ್ರೇಮ ಕಥಾ ಸಿನಿಮಾ ನೆನಪು ಮಾಡುವಂತಹ ಘಟನೆ ನಡೆದಿದೆ. ಲೊಹರಾಪುರ್ವಾ ಗ್ರಾಮದಲ್ಲಿ ನವ ವಿವಾಹಿತೆಯೊಬ್ಬಳು ಶೌಚಾಲಯ ಇಲ್ಲ ಎನ್ನುವ ಕಾರಣಕ್ಕೆ ಗಂಡನ ಮನೆ ತೊರೆಯುವ ನಿರ್ಧಾರಕ್ಕೆ ಬಂದಿದ್ದಳು. ವಧುವಿನ ಈ ನಿರ್ಧಾರ ಕುಟುಂಬಸ್ಥರಲ್ಲಿ ಕಸಿವಿಸಿ ಹುಟ್ಟಿಸಿತ್ತು. ಗ್ರಾಮದ ಮಹಿಳೆಯರ ಮನವೊಲಿಕೆ ನಂತ್ರ ಬೇಗ ಶೌಚಾಲಯ ನಿರ್ಮಾಣದ ಭರವಸೆ ನಂತ್ರ ವಧು ಮನಸ್ಸು ಬದಲಿಸಿದ್ದಾಳೆ.

ಮಾರ್ಚ್ 7,2018ರಂದು ಸುನಿತಾ ಮದುವೆ ನಡೆದಿತ್ತು. ಸುನಿತಾ ಪಿಯುಸಿ ಮುಗಿಸಿದ್ದಾಳೆ. ಗ್ರಾಮ ಪಂಚಾಯತಿ ಚುನಾವಣೆಗೂ ಸ್ಪರ್ಧಿಸಿದ್ದಾಳೆ. ಮದುವೆಗೂ ಮುನ್ನವೇ ಶೌಚಾಲಯ ನಿರ್ಮಾಣ ಮಾಡಬೇಕೆಂದು ಸುನಿತಾ ಷರತ್ತು ವಿಧಿಸಿದ್ದಳು. ಮದುವೆ  ನಂತ್ರ ಶೌಚಾಲಯ ನಿರ್ಮಾಣ ಮಾಡುವುದಾಗಿ ಕುಟುಂಬಸ್ಥರು ಭರವಸೆ ನೀಡಿದ್ದರು.

ಮದುವೆಯಾಗಿ ನಾಲ್ಕು ತಿಂಗಳಾದ್ರೂ ಶೌಚಾಲಯ ನಿರ್ಮಾಣ ಮಾಡಿಲ್ಲ. ಇದ್ರಿಂದ ಬೇಸತ್ತ ಸುನಿತಾ ಗಂಡನ ಮನೆ ತೊರೆಯಲು ನಿರ್ಧರಿಸಿದ್ದಳು. ಗ್ರಾಮದಲ್ಲಿ ಶೌಚಾಲಯ ನಿರ್ಮಾಣ ಕೆಲಸವೊಂದು ಶುರುವಾಗಿತ್ತು. ಆದ್ರೆ ಇದಕ್ಕೆ ಹಳ್ಳಿಯವರು ವಿರೋಧ ವ್ಯಕ್ತಪಡಿಸಿದ್ದರು. ಜಮೀನು ವಿವಾದದಿಂದಾಗಿ ಶೌಚಾಲಯ ನಿರ್ಮಾಣ ಅರ್ಧಕ್ಕೆ ನಿಂತಿದೆ. ಸುನಿತಾ ಮತ್ತೆ ಶೌಚಾಲಯಕ್ಕೆ ಹಠ ಹಿಡಿದಿದ್ದರಿಂದ ಮತ್ತೆ ನಿರ್ಮಾಣ ಕೆಲಸ ಶುರುವಾಗುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...