alex Certify
ಕನ್ನಡ ದುನಿಯಾ       Mobile App
       

Kannada Duniya

ಶವದ ಮೇಲೆ ಓಡಾಡಿದ್ವು ನೂರಕ್ಕೂ ಅಧಿಕ ವಾಹನ: ಉಳಿದಿದ್ದು ಕಾಲು ಮಾತ್ರ

ದಟ್ಟ ಮಂಜು ಜನರ ಜೀವ ಬಲಿ ಪಡೆಯುತ್ತಿದೆ. ಅಂಬಾಲ-ಚಂಡೀಘಡ ಹೆದ್ದಾರಿಯಲ್ಲಿ ಮನ ಕಲಕುವ ಘಟನೆಯೊಂದು ನಡೆದಿದೆ. ರಸ್ತೆ ಮಧ್ಯೆ ಬಿದ್ದ ಯುವಕನ ಹೆಣ ಯಾರಿಗೂ ಕಾಣಲಿಲ್ಲ. ಸುಮಾರು ಒಂದೂವರೆ ಗಂಟೆಗಳ ಕಾಲ ಹೆಣದ ಮೇಲೆ ಒಂದಾದ ಮೇಲೆ ಒಂದು ವಾಹನ ಓಡಾಡಿದೆ.

ಮಾಹಿತಿ ಪ್ರಕಾರ ಅಂಬಾಲ-ಚಂಡೀಘಡ ಹೆದ್ದಾರಿಯಲ್ಲಿ ಬೈಕ್ ಒಂದಕ್ಕೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಆದ್ರೆ ರಸ್ತೆ ಮೇಲೆ ಬಿದ್ದ ಆತನ ಹೆಣ ಯಾರಿಗೂ ಕಾಣಿಸಲಿಲ್ಲ. ಒಂದಾದ ಮೇಲೆ ಒಂದರಂತೆ ಬರೋಬ್ಬರಿ ಒಂದೂವರೆ ಗಂಟೆಗಳ ಕಾಲ ಆತನ ಹೆಣದ ಮೇಲೆ ವಾಹನ ಓಡಾಡಿವೆ.

ಸ್ಥಳೀಯರು ರಸ್ತೆ ಮೇಲೆ ಬಿದ್ದ ಕಾಲನ್ನು ನೋಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರಿಗೆ ಮೃತನ ಕಾಲು ಹಾಗೂ ಮುರಿದ ಮೂಳೆಗಳು ಮಾತ್ರ ಸಿಕ್ಕಿವೆ. ಸ್ಥಳದಲ್ಲಿ ಬಟ್ಟೆ ತುಂಡು ಸಿಕ್ಕಿದ್ದು, ಇದನ್ನು ನೋಡಿ ಪೊಲೀಸರು ಶವ ಪುರುಷನದ್ದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಶವದ ಬಳಿ ಬಿದ್ದ ವಸ್ತುಗಳನ್ನು ನೋಡಿ ಶವ ಸೈನಿಕನದ್ದು ಎಂದು ಅಂದಾಜಿಸಲಾಗಿದೆ. ಡಿ ಎನ್ ಎ ಪರೀಕ್ಷೆ ನಂತ್ರ ಹೆಚ್ಚಿನ ಮಾಹಿತಿ ಸಿಗುವ ಸಾಧ್ಯತೆಯಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...