alex Certify
ಕನ್ನಡ ದುನಿಯಾ       Mobile App
       

Kannada Duniya

ಈ ರಾಜ್ಯದ 150 ಶಾಲೆಗಳಲ್ಲಿ ಶೂನ್ಯ ಫಲಿತಾಂಶ

ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿರುವ 150 ಶಾಲೆಗಳನ್ನು ಸೆನ್ಸಿಟಿವ್ ಎಂದು ಉತ್ತರ ಪ್ರದೇಶ ಸೆಕೆಂಡರಿ ಎಜ್ಯುಕೇಶನ್ ಬೋರ್ಡ್ ಘೋಷಣೆ ಮಾಡಲಿದೆ.

ಉತ್ತರ ಪ್ರದೇಶದ ಬಹುತೇಕ ಶಾಲೆಗಳು ಶಿಕ್ಷಣದಲ್ಲಿ ಬಹಳಷ್ಟು ಹಿಂದುಳಿದಿದ್ದು, 10 ಹಾಗೂ 12 ನೇ ತರಗತಿ ಪರೀಕ್ಷೆಯಲ್ಲಿ ಕೆಲ ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ. ಈ ಬಗ್ಗೆ ಯುಪಿಎಸ್ಇಬಿ ಹೇಳಿಕೆ ನೀಡಿದ್ದು, 98 ಶಾಲೆಗಳು 10 ನೇ ತರಗತಿಯಲ್ಲಿ ಶೂನ್ಯ ಫಲಿತಾಂಶ ಹಾಗೂ 12 ನೇ ತರಗತಿಯಲ್ಲಿ 52 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ. ಇದರಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳೆರಡೂ ಸೇರಿವೆ ಎಂದಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ 150 ಶಾಲೆಗಳನ್ನು ಸೂಕ್ಷ್ಮ ಶಾಲೆಗಳೆಂದು ಘೋಷಿಸಲಾಗುತ್ತಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕಠಿಣ ಹಾಗೂ ಶಿಸ್ತಿನ ಕ್ರಮ ಕೈಗೊಳ್ಳಲು ಆದೇಶಿಸಲಾಗುವುದೆಂದು ಯುಪಿಎಸ್ಇಬಿ ಸೆಕ್ರೆಟರಿ ನೀನಾ ಶ್ರೀವಾತ್ಸವ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...