alex Certify
ಕನ್ನಡ ದುನಿಯಾ       Mobile App
       

Kannada Duniya

ಉದ್ಯಮಿಯಿಂದ ಜಪ್ತಿ ಮಾಡಿರೋ ವಾಹನದ ಬೆಲೆ ಕೇಳಿದ್ರೆ….

ಬಂಧನಕ್ಕೊಳಗಾಗಿರುವ ಬಿಲ್ಡರ್ ಡಿ.ಎಸ್.ಕುಲಕರ್ಣಿಗೆ ಸೇರಿದ ದುಬಾರಿ ವಾಹನಗಳನ್ನು ಆರ್ಥಿಕ ಅಪರಾಧ ದಳ ವಶಪಡಿಸಿಕೊಂಡಿದೆ. ಪುಣೆಯ ಶೋ ರೂಮ್ ಒಂದರಲ್ಲಿ ಈ ವಾಹನಗಳನ್ನು ನಿಲ್ಲಿಸಿಡಲಾಗಿತ್ತು. ಒಂದು ಪೋರ್ಷೆ, ಒಂದು ಬಿಎಂಡಬ್ಲ್ಯೂ, 2 ಟೊಯೊಟಾ ಕ್ಯಾಮ್ರಿ ಹಾಗೂ ಎಂವಿ ಅಗಸ್ಟಾ ಸೂಪರ್ ಬೈಕ್ ಅನ್ನು ಜಪ್ತಿ ಮಾಡಲಾಗಿದೆ.

ಈ ಐಷಾರಾಮಿ ವಾಹನಗಳ ಅಂದಾಜು ಮೌಲ್ಯ ಸುಮಾರು 5 ಕೋಟಿ ರೂಪಾಯಿ. ಫೆಬ್ರವರಿ 17ರಂದು ದೆಹಲಿಯ ಹೋಟೆಲ್ ಒಂದರಲ್ಲಿ ಉದ್ಯಮಿ ಕುಲಕರ್ಣಿ ಮತ್ತವರ ಪತ್ನಿ ಹೆಮಾಂತಿಯನ್ನು ಬಂಧಿಸಲಾಗಿತ್ತು. 2500 ಹೂಡಿಕೆದಾರರಿಗೆ ಸುಮಾರು 230 ಕೋಟಿ ರೂಪಾಯಿ ವಂಚಿಸಿದ ಆರೋಪ ಇವರ ಮೇಲಿದೆ.

ಕೋರ್ಟ್ ಇವರನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಹೂಡಿಕೆದಾರರು ನೀಡಿದ ಹಣವನ್ನೆಲ್ಲ ಬೇರೆ ಬೇರೆ ಪಾರ್ಟ್ ನರ್ಶಿಪ್ ಫರ್ಮ್ ಗಳಲ್ಲಿ ಡೆಪಾಸಿಟ್ ಮಾಡಿ ನಂತರ ಅದನ್ನು ಹೆಮಾಂತಿಯ ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿರೋದು ಸಹ ಬೆಳಕಿಗೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...