alex Certify
ಕನ್ನಡ ದುನಿಯಾ       Mobile App
       

Kannada Duniya

ಕುಡುಕನ ಆರ್ಭಟಕ್ಕೆ ಓಡಿದ ಒಂಟಿ ಸಲಗ !

Elephant

ಕಾಡು ಪ್ರಾಣಿಗಳೆಂದರೆ ಎಂತಹವರು ಭಯಪಡುತ್ತಾರೆ. ಅದರಲ್ಲಿಯೂ ಒಂಟಿ ಸಲಗ ಕಂಡರೆ ದೂರ ಓಡುತ್ತಾರೆ. ಆದರೆ, ಹರಿದ್ವಾರದಲ್ಲಿ ಕುಡುಕನೊಬ್ಬ ದೊಡ್ಡ ಗಾತ್ರದ ಆನೆಯೊಂದನ್ನೇ ಹೆದರಿಸಿ ಹಿಮ್ಮೆಟ್ಟಿಸಿದ್ದಾನೆ. ಈ ಕುಡುಕನ ಆರ್ಭಟಕ್ಕೆ ಹೆದರಿ ಆನೆಯೇ ಕಾಲಿಗೆ ಬುದ್ಧಿ ಹೇಳಿದೆ.

ಆನೆಗಳು ದಾಳಿ ಮಾಡಿದಾಗ ಎಷ್ಟೋ ಮಂದಿ ಬಲಿಯಾಗಿದ್ದಾರೆ. ಆಕ್ರೋಶಗೊಂಡ ಆನೆಗಳು ಮನುಷ್ಯರನ್ನು ಕಂಡರೆ ಸಾಕು ಅಟ್ಟಾಡಿಸಿಕೊಂಡು ಬರುತ್ತವೆ. ಬೆಳೆಯನ್ನು ಕೂಡ ನಾಶ ಮಾಡುತ್ತವೆ. ಆನೆಯೆಂದರೆ ಸಾಕು ಜನ ದೂರ ಸರಿಯುತ್ತಾರೆ. ಇಂತಹ ಸಂದರ್ಭದಲ್ಲಿ ಬೃಹತ್ ಗಾತ್ರದ ಆನೆಯೊಂದನ್ನು ಹಿಮ್ಮೆಟ್ಟಿಸುವ ಮೂಲಕ ಹರಿದ್ವಾರದ ಮದ್ಯ ವ್ಯಸನಿ ಫುಲ್ ಫೇಮಸ್ ಆಗಿಬಿಟ್ಟಿದ್ದಾನೆ. ರಾತ್ರಿ ವೇಳೆಯಲ್ಲಿ ಊರೊಳಗೆ ಆನೆಯೊಂದು ನುಗ್ಗಿದೆ. ಅದೇ ದಾರಿಯಲ್ಲಿ ಬರುತ್ತಿದ್ದ ಈ ವ್ಯಕ್ತಿ ಅದನ್ನು ಕಂಡು ಹೆದರಿಸಿದ್ದಾನೆ.

ಈ ವ್ಯಕ್ತಿಯ ಆರ್ಭಟಕ್ಕೆ ಹೆದರಿದ ಒಂಟಿ ಸಲಗ ಹಿಂದಕ್ಕೆ ಹೆಜ್ಜೆ ಇಟ್ಟಿದೆ. ಇವನು ಅದನ್ನು ಓಡಿಸುತ್ತಾ ಹೋದಂತೆ ಭಯಗೊಂಡ ಆನೆ ಹಿಂದಕ್ಕೆ ಹೆಜ್ಜೆಹಾಕುವ ಈ ದೃಶ್ಯವನ್ನು ಯಾರೋ ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಅದೀಗ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...