alex Certify
ಕನ್ನಡ ದುನಿಯಾ       Mobile App
       

Kannada Duniya

ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿದ ಹುಡುಗಿಯರು

ನಶೆಯಲ್ಲಿದ್ದ 3 ಹುಡುಗಿಯರು ಗುರ್ಗಾಂವ್ ನ ಎಂ.ಜಿ. ರಸ್ತೆಯಲ್ಲಿ ಗಲಾಟೆ ಮಾಡಿದ್ದಾರೆ. ಘಟನೆ ಶನಿವಾರ ರಾತ್ರಿ ನಡೆದಿದೆ. ಸ್ಥಳಕ್ಕೆ ಬಂದ ಗಸ್ತು ಪೊಲೀಸರು ಹುಡುಗಿಯರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ನಂತ್ರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಎಂ.ಜಿ. ರಸ್ತೆಯ ಎಂಜಿಎಫ್ ಮಾಲ್ ಮುಂದೆ ಮಧ್ಯೆ ರಾತ್ರಿ 2 ಗಂಟೆ ಸುಮಾರಿಗೆ ಹುಡುಗಿಯರು ಗಲಾಟೆ ಮಾಡಿದ್ದಾರೆ. ಮೂವರು ಹುಡುಗಿಯರು ಪರಸ್ಪರ ಜಗಳವಾಡ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಹುಡುಗಿಯರ ಮನವೊಲಿಸಲು ಯತ್ನಿಸಿದ್ದಾರೆ. ಆದ್ರೆ ಮದ್ಯದ ಗುಂಗಿನಲ್ಲಿದ್ದ ಹುಡುಗಿಯರು ಗಲಾಟೆ ಮಾಡ್ತ ರಸ್ತೆಗೆ ಬಂದಿದ್ದಾರೆ.

ಮಹಿಳಾ ಪೊಲೀಸರನ್ನು ಸ್ಥಳಕ್ಕೆ ಕರೆಯಿಸಿ ಹುಡುಗಿಯರನ್ನು ಬಂಧಿಸಲಾಗಿದೆ. ನಂತ್ರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಮೂವರು ಹುಡುಗಿಯರು ದೆಹಲಿಯವರಾಗಿದ್ದು, ಅಕ್ಕಪಕ್ಕದ ಕಾಲೋನಿಯಲ್ಲಿ ವಾಸವಾಗಿದ್ದಾರೆ. ಪೂಜಾ, ಜಮಾನಾ, ಬಿಂದು ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿದ್ದಾರೆಂದು ಪೊಲೀಸರು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...