alex Certify
ಕನ್ನಡ ದುನಿಯಾ       Mobile App
       

Kannada Duniya

ಕಂಠಪೂರ್ತಿ ಕುಡಿದು ಮೆಟ್ರೋ ಏರಲು ಬಂದಿದ್ಲು ಯುವತಿ

ನಿಲ್ಲಲೂ ಆಗದಷ್ಟು ಪ್ರಮಾಣದಲ್ಲಿ ಮದ್ಯ ಸೇವಿಸಿ ಮೆಟ್ರೋ ರೈಲು ಏರಲು ಬಂದಿದ್ದ ಯುವತಿಯೊಬ್ಬಳನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಯೋಧರು ತಡೆದಿದ್ದು, ಬಳಿಕ ಆಕೆಯನ್ನು ತಮ್ಮ ವಾಹನದಲ್ಲೇ ಸುರಕ್ಷಿತವಾಗಿ ಮನೆಗೆ ಕಳಿಸಿಕೊಟ್ಟಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಸೋಮವಾರ ರಾತ್ರಿ ದೆಹಲಿಯ ಸಮಯ್ಪುರ್ ಬದ್ಲಿ ಮೆಟ್ರೋ ನಿಲ್ದಾಣಕ್ಕೆ 25 ವರ್ಷದ ಈ ಯುವತಿ ಬಂದಿದ್ದಾಳೆ. ತೂರಾಡುತ್ತಿದ್ದ ಆಕೆಯ ಅವಸ್ಥೆಯನ್ನು ಗಮನಿಸಿದ ನಿಲ್ದಾಣದ ಭದ್ರತಾ ವ್ಯವಸ್ಥೆ ನೋಡಿಕೊಳ್ಳುತ್ತಿರುವ ಸಿಐಎಸ್ಎಫ್ ಯೋಧರು ತಡೆದು ನಿಲ್ಲಿಸಿದ್ದಾರೆ.

ಅಲ್ಲದೇ ನಿಯಮಾವಳಿ ಪ್ರಕಾರ ಮದ್ಯ ಸೇವಿಸಿ ಮೆಟ್ರೋ ಏರುವಂತಿಲ್ಲವೆಂದು ತಿಳಿ ಹೇಳಿದರೂ ಆಕೆ ಕೇಳಿಲ್ಲ. ಕೊನೆ ರೈಲು ಹೋಗುವವರೆಗೂ ಆಕೆ ಅಲ್ಲಿಯೇ ಇದ್ದು, ಬಳಿಕ ಮೆಟ್ರೋ ನಿಲ್ದಾಣದ ಅಧಿಕಾರಿಗಳ ಜೊತೆ ವಾಗ್ವಾದಕ್ಕಿಳಿದಿದ್ದಾಳೆ. ಆಕೆಯನ್ನು ಸಮಾಧಾನಪಡಿಸಲಾಗಿದ್ದು, ಸುರಕ್ಷತೆ ದೃಷ್ಟಿಯಿಂದ ಯುವತಿಯನ್ನು ಒಬ್ಬೊಂಟಿಯಾಗಿ ಕಳಿಸಬಾರದೆಂಬ ನಿರ್ಧಾರಕ್ಕೆ ಬಂದ ಅಧಿಕಾರಿಗಳು ತಮ್ಮದೇ ವಾಹನದಲ್ಲಿ ಮಹಿಳಾ ಸಿಬ್ಬಂದಿಯೊಬ್ಬರನ್ನು ಜೊತೆ ಮಾಡಿ ಆಕೆಯನ್ನು ಮನೆಗೆ ಕಳುಹಿಸಿಕೊಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...