alex Certify
ಕನ್ನಡ ದುನಿಯಾ       Mobile App
       

Kannada Duniya

ಗಗನಸಖಿ ಮೈಕೈ ಮುಟ್ಟಿದ ಕುಡುಕ ಪ್ರಯಾಣಿಕ ಅಂದರ್

ವಿಮಾನದಲ್ಲಿ ಪ್ರಯಾಣಿಸುವಾಗ ಮದ್ಯಪಾನ ಮಾಡಿದ ಕುಡುಕನೊಬ್ಬ ಪುಂಡಾಟಿಕೆ ನಡೆಸಿ ಇದೀಗ, ಜೈಲು ಸೇರಿಸುವ ಘಟನೆ ನಡೆದಿದೆ.

ಮುಂಬೈ – ಬೆಂಗಳೂರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಮದ್ಯಪಾನ ಮಾಡಿ, ಗಗನಸಖಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಯುವಕನ ಈ ವರ್ತನೆ ಬಗ್ಗೆ ವಿಮಾನ ಕ್ಯಾಪ್ಟನ್ ಮುಂಬೈ ಪೊಲೀಸರಿಗೆ ದೂರು ನೀಡಿದ್ದರಿಂದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಬುಧವಾರ ಮುಂಬೈ ಪೊಲೀಸರು ಆರೋಪಿಯನ್ನು ಕೋರ್ಟ್ ಗೆ ಹಾಜರುಪಡಿಸಿದ್ದು ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.

20 ವರ್ಷದ ಗಗನಸಖಿ ನೀಡಿರುವ ದೂರಿನಲ್ಲಿ, ಇಬ್ಬರು ವ್ಯಕ್ತಿಗಳು ವಿಮಾನ ಏರಿದಾಗ ಅಶ್ಲೀಲ ಪದಗಳಿಂದ ನಿಂದಿಸಿದರು. ಸೀಟ್ ಹುಡುಕಿಕೊಂಡು ಹೋಗುವಾಗ ಸಹಾಯ ಮಾಡಲು ಮುಂದಾದಾಗ ವ್ಯಕ್ತಿ ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಹೇಳಿದ್ದಾರೆ.

ಇದರಿಂದ ಬೇಸತ್ತ ಗಗನಸಖಿ, ಇದೇ ವಿಚಾರವಾಗಿ ವಿಮಾನದ ಮೇಲ್ವಿಚಾರಕಿ ಮೂಲಕ ವಿಮಾನದ ಕ್ಯಾಪ್ಟನ್ ಗೆ ಮಾಹಿತಿ ರವಾನಿಸಿದ್ದು, ಕ್ಯಾಪ್ಟನ್ ಸಹಾಯದಿಂದ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ಇದೀಗ ಪೊಲೀಸರು ಪ್ರಕರಣದ ವಿಚಾರವಾಗಿ ಮತ್ತಷ್ಟು ಸಾಕ್ಷಿ ಕಲೆಹಾಕಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...