alex Certify
ಕನ್ನಡ ದುನಿಯಾ       Mobile App
       

Kannada Duniya

ಕುಡಿದ ಅಮಲಲ್ಲಿ ಹಾವು ನುಂಗಿ ಜೀವ ಬಿಟ್ಟ

ಅತಿಯಾಗಿ ಕುಡಿದ ಅಮಲಿನಲ್ಲಿದ್ದ ವ್ಯಕ್ತಿ ಜೀವಂತ ಹಾವು ತಿಂದು ಅಸುನೀಗಿದ ವಿಲಕ್ಷಣ ಘಟನೆಯೊಂದು ಉತ್ತರ ಪ್ರದೇಶದ ಅಮ್ರೋಹ್ ನಲ್ಲಿ ನಡೆದಿದೆ.

ನಲವತ್ತರ ಹರೆಯದ ಮಣಿಪಾಲ್ ಸಿಂಗ್ ರಸ್ತೆ ಬದಿ ಹೋಗುತ್ತಿದ್ದಾಗ ಹಾವು ಕಂಡಿದೆ, ಇದೇ ವೇಳೆ ಕೆಲವರ ಪ್ರಚೋದನೆಯಿಂದ ಆತ ಜೀವಂತ ಹಾವನ್ನು ನುಂಗಿದ್ದಾನೆ.

ಹಾವು ನುಂಗಿದ ನಾಲ್ಕು ತಾಸು ಕಳೆಯುವುದರೊಳಗೆ ಮೈಗೆ ವಿಷವೇರಿದೆ. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಹಾವು ಕಂಡೊಡನೆ ಆತ ಅದನ್ನು ಹಿಡಿದು ತಲೆಮೇಲೆ ಇಟ್ಟುಕೊಂಡಿದ್ದಾನೆ. ಅಲ್ಲಿದ್ದ ಕೆಲವರು ಬಾಯಿಗೆ ಹಾಕಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಅದರಂತೆ ಆತ ಹಾವನ್ನು ಬಾಯಿಗೆ ಹಾಕಿಕೊಂಡ.

ಕೆಲಹೊತ್ತಿನಲ್ಲೇ ಅವನಿಗೆ ಪರಿಣಾಮದ ಅರಿವಾಗಿದೆ. ವಾಂತಿಯನ್ನೂ ಮಾಡಿಕೊಂಡಿದ್ದಾನೆ, ಹಾವು ಮಾತ್ರ ಹೊರಬರಲಿಲ್ಲ. ಬಳಿಕ ಜೀವ ಉಳಿಸಿಕೊಳ್ಳಲು ಸ್ಥಳಿಯ ಆಸ್ಪತ್ರೆಗೆ ಓಡಿದ್ದಾನೆ. ಆದರೆ ಸೂಕ್ತ ಚಿಕಿತ್ಸೆ ಸಿಕ್ಕಿಲ್ಲ.

ಇದೀಗ  ಹಾವು ನುಂಗುವಂತೆ ಪ್ರಚೋದಿಸಿದವರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...