alex Certify
ಕನ್ನಡ ದುನಿಯಾ       Mobile App
       

Kannada Duniya

ಕೂದಲೆಳೆ ಅಂತರದಲ್ಲಿ ತಪ್ಪಿದೆ ಭಾರೀ ರೈಲು ದುರಂತ

ಜಾರ್ಖಂಡ್ ನ ಪಲಮು ಜಿಲ್ಲೆಯ ಡಾಲ್ಟೊಂಗಂಜ್ ನಲ್ಲಿ ಭಾರೀ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಕಂಠಪೂರ್ತಿ ಕುಡಿದಿದ್ದ ಚಾಲಕನೊಬ್ಬ ಪಿಕಪ್ ವಾಹನವನ್ನು ರೈಲ್ವೆ ಹಳಿಯ ಮೇಲೆ ತಂದುಬಿಟ್ಟಿದ್ದ. ವಾಹನ ಹಳಿಗಳ ಮಧ್ಯೆ ಸಿಕ್ಕಿಹಾಕಿಕೊಂಡಿತ್ತು.

ಅದೇ ಸಮಯದಲ್ಲಿ ಟಾಟಾ ಅಮೃತಸರ ಎಕ್ಸ್ ಪ್ರೆಸ್ ರೈಲು ಅಲ್ಲಿಗೆ ಬರುತ್ತಿತ್ತು. ಕೂಡಲೇ ರೈಲಿನ ಚಾಲಕನಿಗೆ ಮಾಹಿತಿ ನೀಡಿದ್ದರಿಂದ ಕೆಲವೇ ಕಿಲೋಮೀಟರ್ ಗಳ ಹಿಂದೆಯೇ ನಿಲ್ಲಿಸಲಾಯ್ತು. ರಾಜಹರ ಮತ್ತು ಲಾಲ್ಗಢ್ ರೈಲು ನಿಲ್ದಾಣಗಳ ಮಧ್ಯೆ ಈ ಅವಾಂತರ ನಡೆದಿದೆ.

ಪಿಕಪ್ ವಾಹನ ಚಾಲಕನನ್ನು ಅಶೋಕ್ ಪಾಸ್ವಾನ್ ಅಂತಾ ಗುರುತಿಸಲಾಗಿದೆ. ಇತ್ತ ಹಳಿಗಳ ಮಧ್ಯೆ ಪಿಕಪ್ ವೆಹಿಕಲ್ ಸಿಕ್ಕಿಹಾಕಿಕೊಂಡಿದ್ರೆ ಅತ್ತ ರೈಲು ರಾಜಹರ ನಿಲ್ದಾಣದಲ್ಲಿ ಸಿಗ್ನಲ್ ದಾಟಿ ಹೊರಟು ಬಿಟ್ಟಿತ್ತು. ಐದು ನಿಮಿಷಗಳೊಳಗೆ ಈ ಸ್ಥಳಕ್ಕೆ ಬಂದು ತಲುಪುತ್ತಿತ್ತು.

ಹಾಗೇನಾದ್ರೂ ಆದ್ರೆ ಭಾರೀ ದುರಂತ ಸಂಭವಿಸೋದ್ರಲ್ಲಿ ಅನುಮಾನವೇ ಇರಲಿಲ್ಲ. ನಿಲ್ದಾಣದಲ್ಲಿದ್ದ ಪ್ರಯಾಣಿಕರು ಸ್ಟೇಶನ್ ಮಾಸ್ಟರ್ ಗೆ ಮಾಹಿತಿ ನೀಡಿದ್ದರಿಂದ ಅಪಘಾತ ತಪ್ಪಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...