alex Certify
ಕನ್ನಡ ದುನಿಯಾ       Mobile App
       

Kannada Duniya

ಕಾದು ಕಾದು ಬಸ್ ಅನ್ನೇ ಹೈಜಾಕ್ ಮಾಡಿದ

ಕೊಲ್ಲಂ: ಮನೆಗೆ ಹೋಗಲು ನಿಲ್ದಾಣದಲ್ಲಿ ಬಸ್ ಗಾಗಿ ಗಂಟೆಗಟ್ಟಲೇ ಕಾದ ವ್ಯಕ್ತಿಯೊಬ್ಬ ಡಿಪೋದಲ್ಲಿ ನಿಲ್ಲಿಸಿದ್ದ ಬಸ್ ಅನ್ನೇ ಹೈಜಾಕ್ ಮಾಡಿದ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ.

ಅಲೋಶೀಯಸ್(25) ಇಂತಹ ಕೃತ್ಯವೆಸಗಿದವ. ತಿರುವನಂತಪುರಂ ಸಮೀಪದ ಅತ್ತಿಂಗಲ್ ನಲ್ಲಿರುವ ಮನೆಗೆ ಅಲೋಶಿಯಸ್ ಹೋಗಬೇಕಿತ್ತು.

ಕೊಲ್ಲಂನಲ್ಲಿ ಸ್ನೇಹಿತನನ್ನು ಭೇಟಿ ಮಾಡಿದ್ದ ಆತ ಮದ್ಯಪಾನ ಮಾಡಿದ್ದ ಅಮಲಿನಲ್ಲಿದ್ದ ಮನೆಗೆ ಹೋಗಲು ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೇ ಕಾದರೂ, ಬಸ್ ಬಂದಿರಲಿಲ್ಲ.

ಕೊನೆಗೆ ಅಸಮಮ್ ಲಿಂಕ್ ರೋಡ್ ಡಿಪೋದಲ್ಲಿ ನಿಂತಿದ್ದ ಕೇರಳ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಚಾಲನೆ ಮಾಡಿಕೊಂಡು ಹೋಗಿದ್ದಾನೆ.

1 ಕಿಲೋ ಮೀಟರ್ ವರೆಗೂ ಹೋಗಿ ಚನ್ನಕದಾ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಸಿದ್ದಾನೆ. ಬಸ್ ಅಲ್ಲೇ ನಿಂತಿದ್ದು, ಅಮಲಿನಲ್ಲಿದ್ದ ಅಲೋಶಿಯಸ್ ಇಳಿದು ಮನೆಗೆ ಹೋಗಿದ್ದಾನೆ.

ಬಸ್ ಗಾಗಿ ಸಾರಿಗೆ ಸಂಸ್ಥೆ ಸಿಬ್ಬಂದಿ ಮತ್ತು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕೊನೆಗೆ ಬಸ್ ಪತ್ತೆಯಾಗಿದ್ದು, ಅದರಲ್ಲಿ ಸಿಕ್ಕ 1 ಶೂ ಆಧಾರದ ಮೇಲೆ ಅಲೋಶಿಯಸ್ ನನ್ನು ಬಂಧಿಸಲಾಗಿದೆ.

ಬೆಳಗಿನ ವೇಳೆ ಬಸ್ ಚಾಲನೆ ಮಾಡಿ ಪರೀಕ್ಷಿಸುವ ಉದ್ದೇಶದಿಂದ ಕೀಯನ್ನು ಬಸ್ ನಲ್ಲೇ ಇಡಲಾಗಿತ್ತು. ಅಲೋಶಿಯಸ್ ಅಮಲಿನಲ್ಲಿ ಬಸ್ ಅಪಹರಿಸಿದ್ದು, ಆತನನ್ನು ಬಂಧಿಸಲಾಗಿದೆ. ವಿದ್ಯುತ್ ಕಂಬ ಮತ್ತು ಬಸ್ ಗೆ ಹಾನಿ ಮಾಡಿದ ಕಾರಣಕ್ಕೆ ದಂಡ ವಿಧಿಸಲಾಗುವುದು ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...