alex Certify
ಕನ್ನಡ ದುನಿಯಾ       Mobile App
       

Kannada Duniya

58 ಪ್ರಯಾಣಿಕರ ಪ್ರಾಣ ಪಣಕ್ಕಿಟ್ಟಿದ್ದ ಪಾನಮತ್ತ ಚಾಲಕ

drunk-drivingಕಂಠಪೂರ್ತಿ ಮದ್ಯ ಕುಡಿದಿದ್ದ ಬಸ್ ಚಾಲಕನೊಬ್ಬ 50 ಕ್ಕೂ ಅಧಿಕ ಪ್ರಯಾಣಿಕರ ಪ್ರಾಣವನ್ನು ಪಣಕ್ಕಿಟ್ಟಿದ್ದಾನೆ. ಮದ್ಯದ ಅಮಲಿನಲ್ಲಿ ಆತ ಯರ್ರಾಬಿರ್ರಿ ಬಸ್ ಚಾಲನೆ ಮಾಡುತ್ತಿದ್ದರೆ ಬಸ್ ನಲ್ಲಿದ್ದ ಪ್ರಯಾಣಿಕರು ಜೀವಭಯದಿಂದ ಕುಳಿತಿದ್ದಾರೆ. ಕಡೆಗೆ ಪೊಲೀಸರು ಮತ್ತು ಸಾರಿಗೆ ಅಧಿಕಾರಿಗಳು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಸ್ ತಡೆದು ನಿಲ್ಲಿಸಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಹೈದ್ರಾಬಾದ್ ನಿಂದ ಭದ್ರಾಚಲಂಗೆ ತೆರಳುತ್ತಿದ್ದ ಭಾರತ್ ಟ್ರಾವೆಲ್ಸ್ ಗೆ ಸೇರಿದ ಬಸ್ ನಲ್ಲಿ 58 ಮಂದಿ ಪ್ರಯಾಣಿಕರಿದ್ದರು. ಚಾಲಕ ನಿರ್ಮಲ್ ಯಾದಗಿರಿ ಕಂಠಪೂರ್ತಿ ಕುಡಿದು ಬಸ್ ಚಾಲನೆ ಮಾಡಲಾರಂಭಿಸಿದ್ದಾನೆ. ವಿಜಯವಾಡ-ಹೈದ್ರಾಬಾದ್ ಹೈವೇ ನಲ್ಲಿ ಬಸ್ ಸಾಗುತ್ತಿದ್ದು, ಈ ವೇಳೆ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದು, ಇದನ್ನು ಗಮನಿಸದೆ ಇತರೆ ವಾಹನಗಳನ್ನು ಓವರ್ ಟೇಕ್ ಮಾಡಿದ್ದಾನೆ.

ಈ ಸಂದರ್ಭದಲ್ಲಿ ಬಸ್ ಡಿವೈಡರ್ ಗೆ ಗುದ್ದಿದ್ದು, ಆದರೂ ಬಸ್ ನಿಲ್ಲಿಸದೆ ಮತ್ತಷ್ಟು ವೇಗ ಹೆಚ್ಚಿಸಿದ್ದಾನೆ. ಇದರಿಂದ ಪ್ರಯಾಣಿಕರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ. ಅಷ್ಟರಲ್ಲಾಗಲೇ ಬಸ್ ವೇಗವಾಗಿ ಸಾಗುತ್ತಿದ್ದುದ್ದನ್ನು ಗಮನಿಸಿದ ಹಯಾತ್ ನಗರ ಪೊಲೀಸರು ಹಾಗೂ ಸಾರಿಗೆ ಅಧಿಕಾರಿಗಳು ಬೆನ್ನಟ್ಟಿ ಕಡೆಗೂ ಬಸ್ ತಡೆದು ನಿಲ್ಲಿಸಿದ್ದಾರೆ. ಬಸ್ ಚಾಲಕನನ್ನು ಪರೀಕ್ಷೆಗೊಳಪಡಿಸಿದಾಗ ನಿಗದಿತ ಪ್ರಮಾಣಕ್ಕಿಂತ 16 ಪಟ್ಟು ಹೆಚ್ಚು ಮದ್ಯ ಸೇವಿಸಿರುವುದು ಪತ್ತೆಯಾಗಿದೆ. ಬಸ್ ಹಾಗೂ ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು ಮತ್ತೊಂದು ಬಸ್ ನಲ್ಲಿ ಪ್ರಯಾಣಿಕರನ್ನು ಭದ್ರಾಚಲಂಗೆ ಕಳುಹಿಸಿಕೊಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...