alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀಮಂತನ ಅಟ್ಟಹಾಸಕ್ಕೆ ಬಲಿಯಾದ ಬಡಪಾಯಿ

50862809

ಚೆನ್ನೈ: ಕುಡಿದು ಮತ್ತೇರಿದ್ದ ಶ್ರೀಮಂತ ಉದ್ಯಮಿಯೊಬ್ಬ ತನ್ನ ದುಬಾರಿ ಬೆಲೆಯ ಐಷಾರಾಮಿ ಕಾರನ್ನು ಅತಿ ವೇಗವಾಗಿ ಚಲಾಯಿಸಿಕೊಂಡು ಬಂದಿದ್ದು, ನಿಯಂತ್ರಣ ತಪ್ಪಿದ ಕಾರು ಬೈಕ್ ನಲ್ಲಿ ಬರುತ್ತಿದ್ದ ಹೋಟೆಲ್ ವೇಯ್ಟರ್ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೇ ಸಾವಿಗೀಡಾದ ದಾರುಣ ಘಟನೆ ನಡೆದಿದೆ.

ಚೆನ್ನೈನಲ್ಲಿ ಈ ಘಟನೆ ನಡೆದಿದ್ದು, ಈರೋಡ್ ಮೂಲದ ಉದ್ಯಮಿ 31 ವರ್ಷದ ಮಹಮ್ಮದ್ ಎಂಬಾತ ತನ್ನ ಸ್ನೇಹಿತ ಫಾರೂಕ್ ಜೊತೆ ಪಾರ್ಟಿ ಮುಗಿಸಿಕೊಂಡು ಬೆಳಗಿನ ಜಾವ 3-30 ರ ಸುಮಾರಿಗೆ ಆಡಿ ಕ್ಯೂ 7 ಸೆಡಾನ್ ಕಾರಿನಲ್ಲಿ ಬರುತ್ತಿದ್ದ ವೇಳೆ ಅಣ್ಣಾಸಲೈ ಬಳಿ ಈ ಅಪಘಾತ ನಡೆದಿದೆ.

ತಾರಾ ಹೋಟೆಲ್ ನಲ್ಲಿ ವೇಯ್ಟರ್ ಆಗಿ ಕೆಲಸ ಮಾಡುತ್ತಿದ್ದ 25 ವರ್ಷದ ಕೆವಿನ್ ರಾಜ್ ಎಂಬಾತ ಗಿಂಡಿಯಲ್ಲಿರುವ ತನ್ನ ಮನೆಗೆ ತೆರಳುತ್ತಿದ್ದು, ವೇಗವಾಗಿ ಬಂದ ಕಾರು ಆತನ ಬೈಕ್ ಗೆ ಅಪ್ಪಳಿಸಿದೆ. ಅಪಘಾತದ ರಭಸಕ್ಕೆ ಕೆವಿನ್ ರಾಜ್ ಮೇಲೆ ಹಾರಿ ಕೆಳಗೆ ಬಿದ್ದಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಡಿ ಕಾರಿನಲ್ಲಿದ್ದ ಏರ್ ಬ್ಯಾಗ್ ಗಳು ತೆರೆದುಕೊಂಡ ಕಾರಣ ಮಹಮ್ಮದ್ ಮತ್ತವನ ಸ್ನೇಹಿತ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...