alex Certify
ಕನ್ನಡ ದುನಿಯಾ       Mobile App
       

Kannada Duniya

”ಪಾಕಿಸ್ತಾನದ ಮೇಲೆ ಅಣುಬಾಂಬ್ ಹಾಕಿಬಿಡಿ”: ಆಚಾರ್ಯ ಧರ್ಮೇಂದ್ರ

vhp

ಜಮ್ಮು-ಕಾಶ್ಮೀರದಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘಿಸಿ ಭಾರತೀಯ ಯೋಧರನ್ನು ಹತ್ಯೆ ಮಾಡುತ್ತಿರುವ ಪಾಕಿಸ್ತಾನದ ಮೇಲೆ ಅಣುಬಾಂಬ್ ಹಾಕುವುದು ಸೂಕ್ತ ಅಂತಾ ವಿ ಎಚ್ ಪಿ ನಾಯಕ ಆಚಾರ್ಯ ಧರ್ಮೇಂದ್ರ ಹೇಳಿದ್ದಾರೆ. ಭಾರತದ ಉಪ ಖಂಡಗಳಲ್ಲಿ ಶಾಂತಿ-ಸುವ್ಯವಸ್ಥೆ ನೆಲೆಸಬೇಕೆಂದ್ರೆ ಪಾಕಿಸ್ತಾನದ ಮೇಲೆ ಅಣುಬಾಂಬ್ ಹಾಕುವುದು ಅನಿವಾರ್ಯ ಅಂತಾ ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನ ಶತ್ರುರಾಷ್ಟ್ರವೇ ಹೊರತು ನಮ್ಮ ನೆರೆರಾಷ್ಟ್ರವಲ್ಲ ಅಂತಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಭಾರತ-ಪಾಕಿಸ್ತಾನ ಇಬ್ಭಾಗದಿಂದ ಉದ್ಭವಿಸಿರುವ ಈ ಸಮಸ್ಯೆಗೆ ಮಹಾತ್ಮಾ ಗಾಂಧಿ ಅವರೇ ಕಾರಣ ಅಂತಾನೂ ಆಚಾರ್ಯ ಧರ್ಮೇಂದ್ರ ಆರೋಪ ಮಾಡಿದ್ದಾರೆ. ಭಾರತದ ನೋಟುಗಳ ಮೇಲೆ ಗಾಂಧಿ ಚಿತ್ರ ಮುದ್ರಿಸುವುದು ಸರಿಯಲ್ಲ ಎಂದಿದ್ದಾರೆ.

ರಾಜಸ್ತಾನದ ಕೋಟಾದಲ್ಲಿ ನಡೆದ ಸಮಾರಂಭವೊಂದರಲ್ಲಿ ಅವರು ಮಾತನಾಡುತ್ತಿದ್ರು. ಗೋವುಗಳನ್ನು ರಾಷ್ಟ್ರಪ್ರಾಣಿ ಮಾತ್ರವಲ್ಲ ದೇಶದ ತಾಯಿಯೆಂದು ಪರಿಗಣಿಸಬೇಕು ಅಂತಾ ಆಚಾರ್ಯ ಧರ್ಮೇಂದ್ರ ಅಭಿಪ್ರಾಯಪಟ್ರು. ಭಾರತದಲ್ಲಿ ಡಾ.ಎಪಿಜೆ ಅಬ್ದುಲ್ ಕಲಾಂ, ಸ್ವಾತಂತ್ರ್ಯ ಹೋರಾಟಗಾರ ಅಶ್ಪಖುಲ್ಲಾ ಖಾನ್ ಅವರಂತಹ ದೇಶಭಕ್ತ ಮುಸಲ್ಮಾನರಿದ್ದಾರೆ ಎಂದ್ರು. ಮೋದಿ ಸರ್ಕಾರ ಕೇವಲ ಸ್ವಚ್ಛತೆ ಮತ್ತು ಶೌಚಾಲಯ ಕಟ್ಟಿಸುವುದರತ್ತ ಮಾತ್ರ ಗಮನಹರಿಸಿದೆ ಅಂತಾ ಟೀಕಿಸಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...