alex Certify
ಕನ್ನಡ ದುನಿಯಾ       Mobile App
       

Kannada Duniya

ದುಬಾರಿಯಾಗಲಿದೆ ಡ್ರೈವಿಂಗ್ ಲೈಸನ್ಸ್..!

DRIVINGರಸ್ತೆ ಸುರಕ್ಷತೆಗಾಗಿಯೇ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಜಾರಿ ಮಾಡಲಾಗ್ತಿದೆ. ಸಂಚಾರ ನಿಯಮ ಪಾಲಿಸದೇ ಇರುವವರಿಗೆ ಹೆಚ್ಚಿನ ದಂಡ ವಿಧಿಸಲಾಗುತ್ತದೆ. ದೇಶದ ಯಾವ ಮೂಲೆಯಲ್ಲಾದ್ರೂ ಸಂಚಾರ ನಿಯಮ ಉಲ್ಲಂಘಿಸೋದು ವಾಹನ ಸವಾರರಿಗೆ ಅತ್ಯಂತ ದುಬಾರಿಯಾಗಲಿದೆ.

ಹೊಸ ಡ್ರೈವಿಂಗ್ ಲೈಸನ್ಸ್ ಪಡೆಯೋದು ಮತ್ತು ಹಳೆಯದನ್ನು ನವೀಕರಿಸುವುದು ಕೂಡ ಕಷ್ಟ. ಎಲ್ಲಾ ಬಗೆಯ ವಾಹನಗಳ ಚಾಲನಾ ಪರವಾನಗಿ ವಿತರಣೆ ಶುಲ್ಕ ಹೆಚ್ಚಳದ ಬಗ್ಗೆ ತಿದ್ದುಪಡಿಯಲ್ಲಿ ಪ್ರಸ್ತಾಪಿಸಲಾಗಿದೆ. ಖಾಸಗಿ ವಾಹನ ಪರವಾನಗಿಗೆ ಸದ್ಯ 320 ರೂಪಾಯಿ ಶುಲ್ಕವಿದ್ದು ಅದು 1200 ರೂಪಾಯಿ ಆಗಲಿದೆ.

ಸದ್ಯ ಲರ್ನರ್ ಲೈಸನ್ಸ್ ಪ್ರತಿ ಕ್ಲಾಸ್ ಗೆ 30 ರೂಪಾಯಿಯಿದ್ದು, ಅದು 150 ರೂಪಾಯಿಗೆ ಏರಿಕೆ ಆಗಲಿದೆ. ಲರ್ನರ್ ಲೈಸನ್ಸ್ ಟೆಸ್ಟ್ ಗೆ ಹೆಚ್ಚುವರಿಯಾಗಿ 50 ರೂಪಾಯಿ ಪಡೆಯುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯ ಲೈಸನ್ಸ್ ನವೀಕರಣಕ್ಕೆ ನೀವು 50 ರೂಪಾಯಿ ಪಾವತಿಸ್ಬೇಕು, ತಿದ್ದುಪಡಿ ಅಂಗೀಕಾರವಾದ್ರೆ 200 ರೂಪಾಯಿ ಕೊಡಬೇಕಾಗುತ್ತದೆ.

ಅಂತರಾಷ್ಟ್ರೀಯ ಡ್ರೈವಿಂಗ್ ಲೈಸನ್ಸ್ ಪಡೆಯಬೇಕಂದ್ರೆ ಅರ್ಜಿ ಸಲ್ಲಿಸಲು 1000 ರೂಪಾಯಿ ಕೊಡಬೇಕಾಗುತ್ತದೆ. ಡ್ರೈವಿಂಗ್ ಸ್ಕೂಲ್ ಗಳ ನವೀಕರಣ ಶುಲ್ಕವೂ 10,000 ಕ್ಕೆ ಏರಿಕೆ ಆಗಲಿದೆ. ಲೈಸನ್ಸ್ ವಿತರಣೆಯಲ್ಲಿ ಭಾರೀ ಗೋಲ್ ಮಾಲ್ ನಡೆಯುತ್ತಿರೋದ್ರಿಂದ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ, ಈಗಾಗ್ಲೇ ಇದಕ್ಕೆ ಸಚಿವ ಸಂಪುಟ ಹಸಿರು ನಿಶಾನೆ ತೋರಿದ್ದು ಲೋಕಸಭೆಯಲ್ಲೂ ವಿಧೇಯಕವನ್ನು ಮಂಡಿಸಲಾಗಿದೆ. ಈ ಕಾಯ್ದೆ ಜಾರಿಯಾದಲ್ಲಿ ವಾಹನ ಸವಾರರ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...