alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಮರಾದಲ್ಲಿ ಸೆರೆಯಾಗಲಿದೆ ನಿಮ್ಮ ಡಿಎಲ್ ಟೆಸ್ಟ್

ದೆಹಲಿಯಲ್ಲಿ ಇನ್ಮೇಲೆ ಡ್ರೈವಿಂಗ್ ಲೈಸನ್ಸ್ ಪಡೆಯೋದು ಬಹಳ ಕಷ್ಟ. ನೀವು ಅಲ್ಪ ಸ್ವಲ್ಪ ಕಲಿತು ಡಿಎಲ್ ಟೆಸ್ಟ್ ಗೆ ಹೋದ್ರೆ ತಿರಸ್ಕೃತರಾಗೋದು ಗ್ಯಾರಂಟಿ. ಯಾಕಂದ್ರೆ ಇನ್ಮೇಲೆ ಡ್ರೈವಿಂಗ್ ಟೆಸ್ಟ್ ವೇಳೆ ವಿಡಿಯೋ ರೆಕಾರ್ಡಿಂಗ್ ಮಾಡಲಾಗುತ್ತದೆ.

ಸರಿಯಾಗಿ ವಾಹನ ಚಲಾಯಿಸಲು ಬಾರದವರು, ಅತಿ ವೇಗವಾಗಿ ವಾಹನ ಓಡಿಸುವವರಿಗೆಲ್ಲ ಸುಲಭವಾಗಿ ಡಿಎಲ್ ಸಿಗುತ್ತಿರುವ ಬಗ್ಗೆ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತ್ತು. ಸರ್ಕಾರಕ್ಕೆ ಕೆಲಸವೊಂದು ಸಲಹೆ, ಸೂಚನೆಗಳನ್ನು ನೀಡಿತ್ತು. ಸಾಮಾಜಿಕ ಕಾರ್ಯಕರ್ತ ಪವನ್ ಕುಮಾರ್ ಎಂಬುವವರು ಈ ಬಗ್ಗೆ ಪಿಐಎಲ್ ಸಲ್ಲಿಸಿದ್ದರು.

ಕೋರ್ಟ್ ಸೂಚನೆಗೆ ಸರ್ಕಾರ ಸಮ್ಮತಿಸಿದೆ. ಇನ್ಮುಂದೆ ಡಿಎಲ್ ಟೆಸ್ಟ್ ಗಳನ್ನೆಲ್ಲ ವಿಡಿಯೋ ರೆಕಾರ್ಡಿಂಗ್ ಮಾಡುವುದಾಗಿ ಹೇಳಿದೆ. ಇದಕ್ಕಾಗಿ ವಿಡಿಯೋ ಗ್ರಾಫರ್ ಗಳನ್ನು ಕೂಡ ನೇಮಕ ಮಾಡಿಕೊಳ್ಳಲಿದೆ. ಡ್ರೈವಿಂಗ್ ಟೆಸ್ಟ್ ನಡೆಯುವ ಸ್ಥಳದಲ್ಲಿ ಸರ್ಕ್ಯೂಟ್ ಕ್ಯಾಮರಾಗಳನ್ನು ಕೂಡ ಅಳವಡಿಸಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...