alex Certify
ಕನ್ನಡ ದುನಿಯಾ       Mobile App
       

Kannada Duniya

ವಾಹನ ಸವಾರರಿಗೆ ಖುಷಿ ಸುದ್ದಿ ನೀಡಿದ ಮೋದಿ ಸರ್ಕಾರ

ವಾಹನ ಸವಾರರಿಗೆ ಕೇಂದ್ರ ಸರ್ಕಾರ ಖುಷಿ ಸುದ್ದಿಯನ್ನು ನೀಡಿದೆ. ಚಾಲನಾ ಪರವಾನಿಗೆ ಸೇರಿದಂತೆ ವಾಹನದ ಯಾವುದೇ ದಾಖಲೆಗಳನ್ನು ನೀವು ವಾಹನದಲ್ಲಿ ಇನ್ಮುಂದೆ ಇಟ್ಟುಕೊಳ್ಳಬೇಕಾಗಿಲ್ಲ. ಡಿಜಿಟಲ್ ಭಾರತದ ಇನ್ನೊಂದು ಹೆಜ್ಜೆಯಾಗಿ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಸಂತೋಷದ ಸುದ್ದಿ ನೀಡಿದೆ. ಕೈನಲ್ಲೊಂದು ಮೊಬೈಲ್, ಅದ್ರಲ್ಲಿ ನಿಮ್ಮ ವಾಹನ ಹಾಗೂ ಚಾಲನಾ ಪರವಾನಿಗೆ ಮಾಹಿತಿಯಿದ್ರೆ ಸಾಕು.

ಕೇಂದ್ರ ಸರ್ಕಾರ ಆರಂಭಿಸಿರುವ DigiLocker’ ಅಥವಾ ‘mParivahan’ನಲ್ಲಿ ನಿಮ್ಮ ವಾಹನ ಹಾಗೂ ಚಾಲನಾ ಪರವಾನಿಗೆ ಮಾಹಿತಿಯನ್ನು ಅಪ್ಲೋಡ್ ಮಾಡಬೇಕು. ಇದಕ್ಕೆ ಸಂಬಂಧಿಸಿದಂತೆ ಗುರುವಾರ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಸಲಹೆ ಜಾರಿ ಮಾಡಿದೆ. ಚಾಲನಾ ಪರವಾನಿಗೆ ಹಾಗೂ ವಾಹನದ ನೋಂದಣಿ ಪ್ರಮಾಣ ಪತ್ರವನ್ನು ಕಾಗದದ ರೂಪದಲ್ಲಿ ಇಟ್ಟುಕೊಳ್ಳುವ ಬದಲು ಡಿಜಿಟಲ್ ರೂಪ ಕೊಡಿ ಎಂದು ಕೇಂದ್ರ ಹೇಳಿದೆ.

ಸರ್ಕಾರ digilocker.gov.in  ವೆಬ್ಸೈಟ್ ಮೂಲಕ ನೀವು ಡಿಜಿಟಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ನಂತ್ರ ನೀವು ಡಿಜಿಲಾಕರ್ ಅಕೌಂಟ್ ತೆರೆಯಬಹುದಾಗಿದೆ. ಇದಕ್ಕಾಗಿ ನೀವು ಮೊಬೈಲ್ ನಂಬರ್ ಹಾಕಬೇಕಾಗುತ್ತದೆ. ನಂತ್ರ ಒನ್ ಟೈಂ ಪಾಸ್ವರ್ಡ್ ಹಾಕಬೇಕು. ಡಿಜಿಲಾಕ್ ಓಪನ್ ಆದ್ಮೇಲೆ ನೀವು ಇದ್ರಲ್ಲಿ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಉಳಿದ ಸೇವೆಗಳನ್ನು ಪಡೆಯಲು ನೀವು ಆಧಾರ್ ನಂಬರ್ ಕೂಡ ಇದ್ರಲ್ಲಿ ನಮೂದಿಸಬಹುದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...