alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಲಕನ ಸಮಯಪ್ರಜ್ಞೆಯಿಂದ ಬದುಕುಳಿದಿದ್ದಾರೆ ಯುವತಿಯರು

ಇಂದಿನ ಒತ್ತಡದ ಜೀವನದಲ್ಲಿ ಯಾರಿಗೂ ತಾಳ್ಮೆಯೇ ಇಲ್ಲದಂತಾಗಿದೆ. ವೇಗದ ಜೀವನದೊಂದಿಗೆ ಹೆಜ್ಜೆ ಹಾಕುವ ಸಲುವಾಗಿ ತಮ್ಮ ಜೀವವನ್ನೇ ಹಲವರು ಪಣಕ್ಕಿಡುತ್ತಿದ್ದಾರೆ. ಕೊಂಚ ತಡೆದು ಹೋದರೂ ಆಕಾಶವೇನೂ ಕಳಚಿ ಬೀಳುವುದಿಲ್ಲವೆಂಬ ಅರಿವಿದ್ದರೂ ಅದನ್ನು ಯಾರೂ ಪರಿಗಣಿಸುತ್ತಿಲ್ಲ.

ತಮಿಳುನಾಡಿನ ಪುದುಕೋಟೈನಲ್ಲಿ ನಡೆದಿರುವ ಘಟನೆಯೊಂದು ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ವಾಸು ಎಂಬವರು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದು, ಇದನ್ನು ಸಹಸ್ರಾರು ಮಂದಿ ವೀಕ್ಷಿಸಿ ಲಾರಿ ಚಾಲಕನ ಸಮಯಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ.

ಟ್ರಾಫಿಕ್ ಸಿಗ್ನಲ್ ಬಳಿ ಲಾರಿ ಚಾಲಕ ತನ್ನ ವಾಹನ ನಿಲ್ಲಿಸಲು ಮುಂದಾಗಿದ್ದು, ಮತ್ತೊಂದು ಬದಿಯಿಂದ ದ್ವಿಚಕ್ರ ವಾಹನದಲ್ಲಿ ಬಂದ ಯುವತಿಯರು ಲಾರಿಯನ್ನು ಗಮನಿಸದೆ ಅದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಇದನ್ನು ಗಮನಿಸಿದ ಲಾರಿ ಚಾಲಕ ತಕ್ಷಣವೇ ಬ್ರೇಕ್ ಹಾಕಿದ್ದು, ಚಕ್ರಗಳಡಿ ಸಿಲುಕಬೇಕಿದ್ದ ಯುವತಿಯರು ಕೊಂಚದರಲ್ಲಿ ಅಪಾಯದಿಂದ ಪಾರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...