alex Certify
ಕನ್ನಡ ದುನಿಯಾ       Mobile App
       

Kannada Duniya

ಮರ್ಮಾಂಗ ಕತ್ತರಿಸಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್

gangeshananda-jpg-image-784-410ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಸ್ವಯಂಘೋಷಿತ ಸ್ವಾಮೀಜಿಯೊಬ್ಬರ ಮರ್ಮಾಂಗ ಕತ್ತರಿಸಿದ್ದ ಕೇರಳದ ಯುವತಿಯ ಪ್ರಕರಣಕ್ಕೆ ಈಗ ನಾಟಕೀಯ ತಿರುವು ಸಿಕ್ಕಿದೆ. ಸ್ವತಃ ಯುವತಿ ಈಗ ನ್ಯಾಯಾಲಯದ ಮುಂದೆ ತನ್ನ ಹೇಳಿಕೆ ದಾಖಲಿಸಿದ್ದು, ತಾನು ಆ ಕೃತ್ಯವೆಸಗಿಲ್ಲ ಹಾಗೂ ಸ್ವಾಮೀಜಿ ತನಗೆ ಲೈಂಗಿಕ ಕಿರುಕುಳ ನೀಡಿಯೂ ಇಲ್ಲ ಎನ್ನುವ ಮೂಲಕ ತಾನು ಈ ಹಿಂದೆ ನೀಡಿದ್ದ ಹೇಳಿಕೆಗೆ ಉಲ್ಟಾ ಹೊಡೆದಿದ್ದಾಳೆ.

ತಾನು 16 ವರ್ಷದವಳಾಗಿದ್ದಾಗಿನಿಂದಲೂ ಸ್ವಾಮಿ ಗಣೇಶಾನಂದ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ಇದರಿಂದ ರೋಸತ್ತು ತಾನು ಮರ್ಮಾಂಗ ಕತ್ತರಿಸಿದ್ದಾಗಿ 23 ವರ್ಷದ ಯುವತಿ ಈ ಹಿಂದೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಳು. ಆಕೆ ಮಾಡಿದ್ದು ಸರಿಯಾಗಿಯೇ ಇದೆ ಎಂದು ದೇಶಾದ್ಯಂತ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಆದರೆ ಇದೀಗ ನ್ಯಾಯಾಲಯದ ಮುಂದೆ ತನ್ನ ಹೇಳಿಕೆ ದಾಖಲಿಸಿರುವ ಯುವತಿ, ಇದೆಲ್ಲ ಪೊಲೀಸರು ಕಟ್ಟಿದ ಕಟ್ಟುಕಥೆ ಎಂದು ಹೇಳಿದ್ದಾಳೆ. ಘಟನೆ ನಡೆದ ದಿನದಂದು ತನ್ನ ಸ್ನೇಹಿತ ಅಯ್ಯಪ್ಪದಾಸ್ ಹಾಗೂ ಆತನ ಸ್ನೇಹಿತರಾದ ಮನೋಜ್ ಮುರಳಿ ಹಾಗೂ ಅಜಿತ್ ಕುಮಾರ್ ಸ್ವಾಮೀಜಿ ಮೇಲೆ ಹಲ್ಲೆ ನಡೆಸುವಂತೆ ಚಾಕು ಕೊಟ್ಟಿದ್ದರು. ಆದರೆ ಸ್ವಾಮೀಜಿ ಕೋಣೆಗೆ ಹೋದ ಬಳಿಕ ಹೆದರಿಕೆಯಾಗಿ ಓಡಿ ಬಂದೆ. ಅದಾದ ಕೆಲ ಹೊತ್ತಿನಲ್ಲೇ ಸ್ವಾಮೀಜಿ ಕಿರುಚಾಡುತ್ತಿರುವುದು ಕೇಳಿಸಿತು. ಬಳಿಕ ಅಯ್ಯಪ್ಪದಾಸ್ ಹೇಳಿಕೊಟ್ಟಂತೆ ಪೊಲೀಸರಿಗೆ ತಿಳಿಸಿದ್ದೆ ಎಂದಿದ್ದಾಳೆ.

ಇದೀಗ ಪ್ರಕರಣ ಈ ತಿರುವು ಪಡೆದಿರುವುದು ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ. ಹಾಗಾದರೆ ಸ್ವಾಮೀಜಿ ಮರ್ಮಾಂಗ ಕತ್ತರಿಸಿದ್ಯಾರು ಎಂಬ ಪ್ರಶ್ನೆ ಮೂಡಿದೆ. ಈ ಘಟನೆ ನಡೆದಾಗಲೇ ಯುವತಿಯ ತಾಯಿ, ಅಯ್ಯಪ್ಪದಾಸ್ ತಮ್ಮ ಪುತ್ರಿಯ ಜೊತೆ ಸ್ನೇಹದಿಂದಿರುವುದನ್ನು ಸ್ವಾಮೀಜಿ ವಿರೋಧಿಸಿದ್ದರು. ಹೀಗಾಗಿ ಪುತ್ರಿಯನ್ನು ಬಳಸಿಕೊಂಡು ಸಾಮೀಜಿಯ ವಿರುದ್ದ ಚಿತಾವಣೆ ನಡೆಸಲಾಗಿದೆ ಎಂದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...