alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಡರ್ ಪಾಸ್ ನಲ್ಲಿ ಸಿಲುಕಿದ ಸ್ಕೂಲ್ ಬಸ್: ಟಾಪ್ ಮೇಲೆ ಹತ್ತಿ ಪ್ರಾಣ ಉಳಿಸಿಕೊಂಡ ಶಾಲಾ ಮಕ್ಕಳು

ಜೈಪುರ: ಕಳೆದ ಕೆಲ ದಿನಗಳಿಂದ ರಾಜಸ್ಥಾನದ ಪೂರ್ವ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಮಳೆಯಿಂದಾಗಿ ಅಂದರ್ ಪಾಸ್ ಗಳಲ್ಲಿ ನೀರು ನುಗ್ಗಿದ ಪರಿಣಾಮ ಶಾಲಾ ಬಸ್ ವೊಂದು ಸಿಲುಕಿಕೊಂಡಿದ್ದು, ತಕ್ಷಣ ಜಾಗೃತರಾದ ಮಕ್ಕಳು ಬಸ್ ನ ಟಾಪ್ ಮೇಲೆ ಹತ್ತಿ ಪ್ರಾಣ ಉಳಿಸಿಕೊಂಡಿರುವ ಘಟನೆ ದೌಸಾ ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ಲಾಲ್‍ಸೆಟ್ ಪ್ರದೇಶದಲ್ಲಿ ಜಲಾವೃತವಾದ ಅಂಡರ್ ಪಾಸಿನಲ್ಲಿ ಸ್ಕೂಲ್ ಬಸ್ ಸಿಲುಕಿಕೊಂಡ ಪರಿಣಾಮ ನೀರು ಬಸ್ ಒಳಗೆ ನುಗ್ಗಲು ಪ್ರಾರಂಭಿಸಿದೆ. ತಕ್ಷಣ ಸಮಯ ಪ್ರಜ್ಞೆ ಮೆರೆದ 50ಕ್ಕೂ ಹೆಚ್ಚು ಮಕ್ಕಳು ಒಬ್ಬೊಬ್ಬರಾಗಿ ಬಸ್ ನ ಟಾಪ್ ಮೇಲೆ ಹತ್ತಿ ಪಾರಾಗಿದ್ದಾರೆ. ಬಳಿಕ ಮಕ್ಕಳನ್ನು ಸ್ಥಳೀಯರು ಈಜಿಕೊಂಡು ಬಂದು ರಕ್ಷಿಸಿದ್ದಾರೆ.

ಕಳೆದ 2-3 ದಿನಗಳಿಂದ ರಾಜಸ್ಥಾನದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ದುಂಗರಪುರ ಜಿಲ್ಲೆಯ ಗಾಲಿಯಾಕೋಟ್ ಮತ್ತು ಬನ್ಸ್ವಾರಾ ಜಿಲ್ಲೆಯಲ್ಲಿ ಅತಿಹೆಚ್ಚು ಮಳೆಯಾಗಿದೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...