alex Certify
ಕನ್ನಡ ದುನಿಯಾ       Mobile App
       

Kannada Duniya

ಹನಿಮೂನ್ ಗೆ ಹೋಗಿ ಬಂದವಳು ಏರ್ಪೋರ್ಟ್ ನಿಂದ ಪರಾರಿ

airport 5780ಪತಿ ಜೊತೆ ಹನಿಮೂನ್ ಮುಗಿಸಿಕೊಂಡು ಬಂದ ನವ ವಧು ಒಬ್ಬಳು ಏರ್ಪೋರ್ಟ್ ನಿಂದ ತನ್ನ ಪ್ರಿಯಕರನ ಜೊತೆ ಪರಾರಿಯಾಗಿರುವ ಘಟನೆ ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಲಕ್ನೋ ಮೂಲದ ಈ ನವದಂಪತಿಗಳು ಹಿಮಾಲಯದ ಬಾಗ್ದೋಗ್ರಾಕ್ಕೆ ಹನಿಮೂನ್ ಗೆಂದು ತೆರಳಿದ್ದರು. ಸೋಮವಾರ ಸಂಜೆ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದು, ವಾಪಾಸ್ ಲಕ್ನೋಗೆ ತೆರಳಲು ಸಜ್ಜಾಗಿದ್ದರು. ಈ ವೇಳೆ ಪತ್ನಿ ವಾಶ್ ರೂಂ ಗೆ ಹೋಗಿ ಬರುವುದಾಗಿ ಹೇಳಿ ತನ್ನ ಮೊಬೈಲ್ ಸೇರಿದಂತೆ ಬ್ಯಾಗ್ ಅನ್ನು ಪತಿ ಬಳಿ ನೀಡಿ ಹೋಗಿದ್ದಾಳೆ.

ಎಷ್ಟು ಹೊತ್ತು ಕಾದರೂ ಪತ್ನಿ ವಾಪಾಸ್ ಬಾರದ ಕಾರಣ ಕಂಗಾಲಾದ ಪತಿ, ವಿಮಾನ ನಿಲ್ದಾಣದ ಭದ್ರತಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾನೆ. ಅವರುಗಳು ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿದ ವೇಳೆ, ವಾಶ್ ರೂಮ್ ಗೆ ಹೋದ ಆತನ ಪತ್ನಿ ಕೆಲವೇ ನಿಮಿಷಗಳಲ್ಲಿ ಬುರ್ಖಾ ಧರಿಸಿ ಹೊರ ಬಂದಿದ್ದು, ತನಗಾಗಿ ಕಾದು ನಿಂತವನೊಬ್ಬನ ಜೊತೆ ವಿಮಾನ ನಿಲ್ದಾಣದಿಂದ ಹೊರ ಬಂದು ಟ್ಯಾಕ್ಸಿಯಲ್ಲಿ ಹೋಗಿರುವುದು ಪತ್ತೆಯಾಗಿದೆ. ಅವರುಗಳು ಮೊದಲೇ ಪ್ಲಾನ್ ಮಾಡಿಕೊಂಡು ಪರಾರಿಯಾಗಿರಬೇಕೆಂದು ಶಂಕಿಸಲಾಗಿದ್ದು, ಪತಿ ಈ ಕುರಿತು ಯಾವುದೇ ದೂರು ನೀಡದೆ ವಾಪಾಸ್ ಲಕ್ನೋಗೆ ತೆರಳಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...