alex Certify
ಕನ್ನಡ ದುನಿಯಾ       Mobile App
       

Kannada Duniya

ಚಡಪಡಿಸುತ್ತಿದ್ದ ಮಕ್ಕಳಿಗೆ ದೇವರಾದ ವೈದ್ಯರು

download-4

ಉತ್ತರ ಪ್ರದೇಶದ ಗೋರಕ್ಪುರ ಬಿ ಆರ್ ಡಿ ಮೆಡಿಕಲ್ ಕಾಲೇಜಿನಲ್ಲಿ ಆಮ್ಲಜನಕದ ಕೊರತೆಯಿಂದಾಗಿ ನವಜಾತ ಶಿಶು ಸೇರಿದಂತೆ 60ಕ್ಕೂ ಹೆಚ್ಚು ಮಕ್ಕಳು ಕೊನೆಯುಸಿರೆಳೆದಿವೆ. ಘಟನೆ ಸಂಬಂಧ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತನಿಖೆಗೆ ಆದೇಶ ನೀಡಿದ್ದಾರೆ. ಈ ಮಧ್ಯೆ ಕೆಲ ಮಕ್ಕಳಿಗೆ ದೇವರಾಗಿ ಬಂದಿದ್ದಾರೆ ವೈದ್ಯ ಕಫೀಲ್ ಅಹ್ಮದ್.

ವೈದ್ಯ ಕಫೀಲ್ ಅಹ್ಮದ್ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮೆಚ್ಚುಗೆ ಗಳಿಸುತ್ತಿದ್ದಾರೆ. ಗುರುವಾರ ಮಧ್ಯರಾತ್ರಿ ಅವರು ಮಾಡಿದ ಕೆಲಸ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಗುರುವಾರ ರಾತ್ರಿ 2 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಾಗಿದೆ ಎಂಬ ಮಾಹಿತಿ ವೈದ್ಯರಿಗೆ ಸಿಕ್ಕಿದೆ.

ತಕ್ಷಣ ಎಚ್ಚೆತ್ತ ಕಫೀಲ್ ತಮ್ಮ ವೈದ್ಯ ಸ್ನೇಹಿತರಿಂದ ಮೂರು ಸಿಲಿಂಡರ್ ಪಡೆದು ಆಸ್ಪತ್ರೆಗೆ ಬಂದಿದ್ದಾರೆ. ಇದ್ರಿಂದ ಸ್ವಲ್ಪ ಹೊತ್ತು ಆಸ್ಪತ್ರೆ ಪರಿಸ್ಥಿತಿ ಸುಧಾರಿಸಿತ್ತು. ಕಫೀಲ್ ರಾತ್ರಿಯನ್ನು ಹೇಗೋ ದೂಡಿದ್ದಾರೆ. ಆದ್ರೆ ಬೆಳಿಗ್ಗೆ ಮತ್ತೆ ಸಮಸ್ಯೆ ಕಾಡಲು ಶುರುವಾಗಿದೆ. ಆಗ್ಲೇ ಅನೇಕ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಆದ್ರೆ ಯಾರೂ ಫೋನ್ ಎತ್ತಲಿಲ್ಲವಂತೆ. ಮತ್ತೆ ಸ್ನೇಹಿತರ ಸಹಾಯ ಕೇಳಿದ ಕಫೀಲ್  ಕೆಲ ಸಿಲಿಂಡರ್ ತರಿಸಿಕೊಂಡಿದ್ದಾರೆ.

ನಗರದಲ್ಲಿದ್ದ 6 ಆಕ್ಸಿಜನ್ ನೀಡುವ ಸಂಸ್ಥೆಗೆ ಕರೆ ಮಾಡಿದ್ದಾರೆ. ಕ್ಯಾಶ್ ನೀಡಿದ್ರೆ ಸಿಲಿಂಡರ್ ಕೊಡುವುದಾಗಿ ಹೇಳಿದೆಯಂತೆ ಸಂಸ್ಥೆ. ತಮ್ಮ ಸಿಬ್ಬಂದಿ ಕೈಗೆ ಪೇಟಿಎಂ ನೀಡಿದ ಕಫೀಲ್ ಹಣ ನೀಡಿ ಆಕ್ಸಿಜನ್ ತರಿಸಿಕೊಂಡಿದ್ದಾರೆ. ಈ ಮೂಲಕ ಸಾಕಷ್ಟು ಮಕ್ಕಳ ಜೀವ ಉಳಿಸಿರುವ ವೈದ್ಯರು ದೇವರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...