alex Certify
ಕನ್ನಡ ದುನಿಯಾ       Mobile App
       

Kannada Duniya

ವರದಕ್ಷಿಣೆ ಆಸೆಗಾಗಿ ಮಾಡಿದ್ರು ನಾಚಿಕೆಗೇಡಿನ ಕೃತ್ಯ

women harassmentಮಹಿಳೆಯರ ಮೇಲಿನ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮನುಷ್ಯತ್ವವನ್ನೇ ಮರೆತ ನರರೂಪಿ ರಾಕ್ಷಸನೊಬ್ಬ ಮಾಡಿದ ಕೃತ್ಯದ ವರದಿ ಇಲ್ಲಿದೆ.

ಪತ್ನಿ ತವರು ಮನೆಯಿಂದ 50 ಸಾವಿರ ರೂ. ವರದಕ್ಷಿಣೆ ತರಲಿಲ್ಲವೆಂಬ ಕಾರಣಕ್ಕೆ ಪಾಪಿ ಪತಿಯೊಬ್ಬ ಆಕೆಯ ಮೈ ಮೇಲೆ ಕುದಿಯುವ ನೀರು ಸುರಿದಿದ್ದಾನೆ. ಇದರಿಂದ ತೀವ್ರ ಸುಟ್ಟ ಗಾಯಗಳಾಗಿರುವ ಆಕೆ ಈಗ ಸಾವು- ಬದುಕಿನ ನಡುವೆ ಹೋರಾಡುತ್ತಿದ್ದಾಳೆ.

ಕೋಲ್ಕತ್ತಾದ ಮಾಲ್ಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಜಾದ್ ಶೇಖ್ ಎಂಬಾತ ತನ್ನ 21 ವರ್ಷದ ಪತ್ನಿ ರೆಹನಾ ಮೇಲೆ ಈ ಕೃತ್ಯವೆಸಗಿದ್ದಾನೆ. ಇವರ ವಿವಾಹ 5 ವರ್ಷಗಳ ಹಿಂದೆ ನೆರವೇರಿದ್ದು, ಇಬ್ಬರು ಮಕ್ಕಳು ಇದ್ದರೆನ್ನಲಾಗಿದೆ. ಮದುವೆ ಸಂದರ್ಭದಲ್ಲಿ ಸಾಕಷ್ಟು ವರದಕ್ಷಿಣೆ ನೀಡಿದ್ದರೂ ಪತಿ ಮನೆಯವರ ದಾಹ ತೀರಿಲ್ಲ. ಹೀಗಾಗಿ ಆಕೆಗೆ ನಿತ್ಯ ಹಿಂಸೆ ನೀಡುತ್ತಿದ್ದರೆಂದು ಹೇಳಲಾಗಿದೆ. ಇತ್ತೀಚೆಗೆ ಮತ್ತೇ 50 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದು, ತವರು ಮನೆಯಿಂದ ತಾರದ ಕಾರಣ ರೆಹನಾ ಮೇಲೆ ಕುದಿಯುವ ನೀರು ಸುರಿಯಲಾಗಿದೆ. ಶೇ.70 ರಷ್ಟು ಸುಟ್ಟ ಗಾಯಗಳಾಗಿರುವ ಆಕೆ ಸಾವು- ಬದುಕಿನ ನಡುವೆ ಹೋರಾಡುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...