alex Certify
ಕನ್ನಡ ದುನಿಯಾ       Mobile App
       

Kannada Duniya

ಕೈಗಳೇ ಇಲ್ಲದಿದ್ರೂ ಅಡುಗೆಯಲ್ಲಿ Ph.D

ಮಾಳವಿಕಾ ಅಯ್ಯರ್ ಪಾಕ ಪ್ರವೀಣೆ. ರುಚಿ ರುಚಿಯಾದ ತಿನಿಸುಗಳನ್ನು ಮಾಡೋದ್ರಲ್ಲಿ ಎತ್ತಿದ ಕೈ. ಆದ್ರೆ ಮಾಳವಿಕಾಗೆ ಎರಡೂ ಕೈಗಳೂ ಇಲ್ಲ. 13 ವರ್ಷದವಳಾಗಿದ್ದಾಗ್ಲೇ ಬಾಂಬ್ ಸ್ಫೋಟವೊಂದರಲ್ಲಿ ಮಾಳವಿಕಾ ತನ್ನೆರಡೂ ಕೈಗಳನ್ನು ಕಳೆದುಕೊಂಡಿದ್ರು.

ಆದ್ರೆ ಛಲ ಬಿಡದ ಮಾಳವಿಕಾ ಈಗ ಪಿ ಎಚ್ ಡಿ ಪದವಿ ಪಡೆದಿದ್ದಾರೆ. ಈ ಬಗ್ಗೆ ಮಾಳವಿಕಾ ಮಾಡಿರೋ ಫೇಸ್ಬುಕ್ ಪೋಸ್ಟ್ ಕೂಡ ವೈರಲ್ ಆಗಿದೆ. ಖ್ಯಾತ ಬಾಣಸಿಗ ವಿಕಾಸ್ ಖನ್ನಾ ಕೂಡ ಮಾಳವಿಕಾರ ಪಾಕಕಲೆಯನ್ನು ಮೆಚ್ಚಿಕೊಂಡಿದ್ದು, ಅವರ ಸಾಧನೆಗೆ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ.

ಬೆರಳುಗಳೇ ಇಲ್ಲದಿದ್ರೂ ಮಾಳವಿಕಾ ತಮ್ಮ ಪಿ ಎಚ್ ಡಿ ಪ್ರಬಂಧವನ್ನು ಬರೆದಿದ್ದಾರೆ. ಈಗ ಡಾಕ್ಟರ್ ಮಾಳವಿಕಾ ಅಯ್ಯರ್ ಎನಿಸಿಕೊಂಡಿದ್ದಾರೆ. ಮಾಳವಿಕಾರ ಫೇಸ್ಬುಕ್ ಪೋಸ್ಟ್ ಅನ್ನು 3000ಕ್ಕೂ ಹೆಚ್ಚು ಜನರು ಶೇರ್ ಮಾಡಿದ್ದಾರೆ. ಮಾಳವಿಕಾ ನಿಜಕ್ಕೂ ಮಹಿಳೆಯರಿಗೆ ಮಾದರಿಯಾಗಿದ್ದಾರೆ ಅಂತಾ ಶ್ಲಾಘಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...