alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆ ಬಾಗಿಲಲ್ಲೇ ಲಭ್ಯವಾಗಲಿವೆ ಸರ್ಕಾರದ ಹಲವು ಸೇವೆಗಳು

ಸರಕಾರಿ ಕಚೇರಿಗೆ ಹೋದರೆ ಕೆಲ ಕೆಲಸಗಳು ಆಗಲು ತಿಂಗಳಾನುಗಟ್ಟಲೆ ತೆಗೆದುಕೊಳ್ಳುತ್ತದೆ. ಇದಕ್ಕಾಗಿಯೇ ಸರಕಾರಿ ಕಚೇರಿಗೆ ತೆರಳಲು ಎಲ್ಲರೂ ಹಿಂದೇಟು ಹಾಕುತ್ತಾರೆ.

ಆದರೆ ದೆಹಲಿಯಲ್ಲಿ ಇನ್ನು ಮುಂದೆ ಸರಕಾರವೇ ಮನೆಬಾಗಿಲಿಗೆ ಬಂದು ನಿಮ್ಮ ಕೆಲಸ ಮಾಡಿಕೊಡಲಿದೆ. ಡ್ರೈವಿಂಗ್‌ ಲೈಸನ್ಸ್‌, ವಾಟರ್‌ ಕನೆಕ್ಷನ್‌, ಮದುವೆ ಪ್ರಮಾಣ ಪತ್ರ ಸೇರಿದಂತೆ 40 ಬಗೆಯ ಸರಕಾರಿ ಸೇವೆಗಳು ಇಂದಿನಿಂದ ಮನೆಬಾಗಿಲಲ್ಲೇ ಲಭ್ಯವಾಗಲಿದೆ.

ಆಮ್‌ ಆದ್ಮಿ ಪಾರ್ಟಿಯ ಬಹು ನಿರೀಕ್ಷಿತ ಯೋಜನೆ ಇದಾಗಿದ್ದು, ವಿಶ್ವದಲ್ಲೇ ಮೊದಲ ಬಾರಿಗೆ ಸರಕಾರಿ ಸೇವೆಗಳು ಮನೆಬಾಗಿಲಿಗೆ ಬರಲಿವೆ ಎಂದು ಸಿಎಂ ಅರವಿಂದ್‌ ಕೇಜ್ರಿವಾಲ್ ಹೇಳಿದ್ದರು.

ಈ ಹಿಂದೆ ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಈ ಯೋಜನೆ ಜಾರಿಗೆ ತಡೆ ನೀಡಿದ್ದರು. 5 ಮಂದಿ ನ್ಯಾಯಾಧೀಶರ ಸಾಂವಿಧಾನಿಕ ಪೀಠ ಯೋಜನೆಗೆ ಗ್ರೀನ್‌ ಸಿಗ್ನಲ್‌ ನೀಡಿದ ಬಳಿಕ ಇದೀಗ ಅನುಷ್ಠಾನಗೊಳ್ಳುತ್ತಿದೆ. ಭ್ರಷ್ಟಾಚಾರ ತಡೆಗೆ ಇದು ಮಹತ್ವದ ಹೆಜ್ಜೆಯಾಗಲಿದೆ ಎಂದು ಕೇಜ್ರಿವಾಲ್‌ ಹೇಳಿಕೆ ನೀಡಿದ್ದರು.

ಜಾತಿ ಪ್ರಮಾಣ ಪತ್ರ, ವಾಹನ ಚಾಲನೆ ಪರವಾನಗಿ ಸೇರಿ 40 ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸಲಿದ್ದು, ಇದಕ್ಕೆ 50ರೂ. ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಖಾಸಗಿ ಏಜೆನ್ಸಿಗಳನ್ನು ಇದಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಕಾಲ್‌ಸೆಂಟರ್‌ ಮೂಲಕ ಯೋಜನೆ ಜಾರಿಯಾಗಲಿದೆ. ಮೊಬೈಲ್ ಸಹಾಯಕರನ್ನು ಇದಕ್ಕಾಗಿ ನೇಮಿಸಲಾಗುತ್ತದೆ.

ಸಾರ್ವಜನಿಕರು ತಮಗೆ ಅಗತ್ಯವಾದ ಸೇವೆಯನ್ನು ಕಾಲ್‌ಸೆಂಟರ್‌ಗೆ ಕರೆ ಮಾಡಿ ತಿಳಿಸಿದರೆ, ಮೊಬೈಲ್‌ ಸಹಾಯಕ್ ಮನೆಗೆ ಬಂದು, ಅಗತ್ಯ ವಿವರಗಳನ್ನು ಸಂಗ್ರಹಿಸುತ್ತಾರೆ. ಅಗತ್ಯವಾದಲ್ಲಿ ಕಚೇರಿಗೆ ತೆರಳಬೇಕಾಗುತ್ತದೆ ಅಷ್ಟೇ. ಅಂದರೆ, ವಾಹನ ಪರವಾನಗಿ ಪಡೆಯುವ ವೇಳೆ ದಾಖಲೆಗಳನ್ನು ಸಲ್ಲಿಸಲು ಹೋಗುವ ಅವಶ್ಯಕತೆ ಇಲ್ಲ. ಕೇವಲ ವಾಹನ ಚಾಲನೆ ಪರೀಕ್ಷೆ ಎದುರಿಸಲು ಹೋದರೆ ಸಾಕು.

ಬಯೋಮೆಟ್ರಿಕ್‌ ಸೇವೆಗಳು, ಕ್ಯಾಮರಾ ಸೇರಿದಂತೆ ಇನ್ನಿತರ ಅಗತ್ಯ ಉಪಕರಣಗಳನ್ನು ಮೊಬೈಲ್‌ ಸಹಾಯಕ್ ಕೈಯಲ್ಲಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...