alex Certify
ಕನ್ನಡ ದುನಿಯಾ       Mobile App
       

Kannada Duniya

ಹಣ ಸ್ವೀಕರಿಸಲು ನಿರಾಕರಿಸಿ ಮಾನವೀಯ ಮೌಲ್ಯ ಎತ್ತಿ ಹಿಡಿದ ಮೀನುಗಾರರು

ಕೇರಳದಲ್ಲಿ ಮಳೆ ಅಟ್ಟಹಾಸ ಮೆರೆದಿದೆ. ವರುಣನ ಕೋಪಕ್ಕೆ ನೂರಾರು ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಹದಲ್ಲಿ ಸಿಕ್ಕಿ ಹಾಕಿಕೊಂಡವರ ರಕ್ಷಣೆಗೆ ವಿಪತ್ತು ರಕ್ಷಣಾ ಸಿಬ್ಬಂದಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಇಷ್ಟೇ ಏಕೆ, ಸ್ಥಳೀಯ ವಾಸಿಗಳು ಸಹ ಕಷ್ಟದಲ್ಲಿರುವ ಜನರಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.

ಕೇರಳದಲ್ಲಿನ ಮೀನುಗಾರರು ಸಾರ್ವಜನಿಕರಿಗೆ ತಮ್ಮದೇ ರೀತಿಯಲ್ಲಿ ಸಹಾಯ ಮಾಡಿ ಜನರ ಮನ ಗೆದ್ದಿದ್ದಾರೆ. ಅಲ್ಲದೆ ಇವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿವೆ. ಸಂಕಷ್ಟದಲ್ಲಿದ್ದ ಜನರನ್ನು ಕಾಪಾಡಿದ್ದಕ್ಕೆ ಸಿ.ಎಂ ಶ್ಲಾಘಿಸಿದ್ದಾರೆ. ಅಲ್ಲದೆ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಮೀನುಗಾರರ ಪ್ರತಿ ಕುಟುಂಬಕ್ಕೆ 3000 ಸಾವಿರ ನೀಡಲು ಮುಂದಾಗಿದ್ದಾರೆ. ಆದ್ರೆ, ಸಿಎಂ ನೀಡುವ ಹಣವನ್ನು ಪಡೆಯಲು ಮೀನುಗಾರರು ಒಪ್ಪಿಲ್ಲ.

ನಮ್ಮದೇ ಅಕ್ಕಪಕ್ಕದವರ ಜೀವ ಉಳಿಸಿ ಅದರಿಂದ ಹಣ ಸಂಪಾದನೆ ಮಾಡುವ ಇರಾದೆ ನಮ್ಮದಾಗಿರಲಿಲ್ಲ. ಕೇರಳದಲ್ಲಿ ಪ್ರವಾಹ ಜನರ ನಿದ್ದೆಗೆಡಿಸಿದೆ. ನಾವು ಸಹ ನಮ್ಮ ಕೈಲಾದ ಸಹಾಯ ಮಾಡಿದ್ದೇವೆ ಅಷ್ಟೇ. ಸಿ.ಎಂ ನೀಡುವ ಹಣಕ್ಕಿಂತ ನಾವು ಬೇರೆಯವ ಜೀವವನ್ನು ಉಳಿಸಿದ ಸಂತಸ ನಮಗಿದೆ ಎಂದು ಮೀನುಗಾರರು ತಿಳಿಸಿದ್ದಾರೆ.

ಪ್ರವಾಹದ ಅಟ್ಟಹಾಸಕ್ಕೆ ಹಾನಿಗೊಳಗಾದ ಮೀನುಗಾರರ ಬೋಟ್ ಗಳ ದುರಸ್ತಿ ಕಾರ್ಯವನ್ನು ಉಚಿತವಾಗಿ ಮಾಡಿಕೊಡಲು ಸರ್ಕಾರ ಮುಂದಾಗಿದೆ. ಈ ನಿರ್ಧಾರ ಮೀನುಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...