alex Certify
ಕನ್ನಡ ದುನಿಯಾ       Mobile App
       

Kannada Duniya

ಆತಂಕ ಬೇಡ, ಬೇಕೆನಿಸಿದಾಗ ಪಡೆಯಲು ಹಣವಿದೆ

bank

ನವದೆಹಲಿ:  ದೇಶದಲ್ಲಿ ಬ್ಯಾಂಕ್, ಎ.ಟಿ.ಎಂ. ಸೆಂಟರ್ ಗಳ ಎದುರು ಜನ ಜಂಗುಳಿ ನೆರೆದಿದ್ದು, ಹಣ ಪಡೆಯುವ ಧಾವಂತದಲ್ಲಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಆರ್.ಬಿ.ಐ., ಬ್ಯಾಂಕ್ ಗಳಲ್ಲಿ ಅಗತ್ಯಕ್ಕೆ ಬೇಕಾದಷ್ಟು ಕಡಿಮೆ ಮುಖಬೆಲೆಯ ನೋಟುಗಳು ಇವೆ. ಜನ ತಮಗೆ ಹಣವೇ ಸಿಗುವುದಿಲ್ಲ ಎನ್ನುವ ಆತಂಕಕ್ಕೆ ಒಳಗಾಗಬೇಕಿಲ್ಲ. ತಮ್ಮ ಹಣವನ್ನು ಬೇಕೆನಿಸಿದಾಗ ಖಾತೆಗೆ ಹಾಕಲು ಮತ್ತು ಮತ್ತು ಪಡೆದುಕೊಳ್ಳಲು ಅವಕಾಶ ಇದೆ ಎಂದು ತಿಳಿಸಿದೆ. ಕಡಿಮೆ ಮುಖಬೆಲೆಯ ನೋಟುಗಳನ್ನು ನಿಮಗೆ ಅಗತ್ಯವಿರುವಷ್ಟು ಪಡೆದುಕೊಳ್ಳಿ. ಮತ್ತೆ ಬೇಕೆನಿಸಿದರೆ, ಇನ್ನೂ ಹಣವಿದೆ ಎಂದು ಹೇಳಿದೆ.

ಅನೇಕ ಎ.ಟಿ.ಎಂ.ಗಳಲ್ಲಿ ಹಣ ಕೆಲವೇ ಗಂಟೆಗಳಲ್ಲಿ ಖಾಲಿಯಾಗುತ್ತಿದೆ. ಮತ್ತೆ ಕೆಲವು ಎ.ಟಿ.ಎಂ.ಗಳಲ್ಲಿ ಬಾಗಿಲು ತೆರೆದಿಲ್ಲ. ಬಾಗಿಲು ತೆರೆದ ಎ.ಟಿ.ಎಂ.ಗಳಲ್ಲಿ ಚಲಾವಣೆಯಲ್ಲಿರುವ ನೋಟುಗಳು ಬರುತ್ತಿದ್ದು, ಕೆಲವರು ದಿನಾಲು ಹಣ ಪಡೆದುಕೊಳ್ಳುತ್ತಿದ್ದಾರೆ. ಹಣ ಸಿಗದವರು ಆತಂಕಕ್ಕೆ ಒಳಗಾಗಿದ್ದಾರೆ.

ಹಾಗಾಗಿ, ಆರ್.ಬಿ.ಐ. ಸ್ಪಷ್ಟನೆ ನೀಡಿದ್ದು, ಆತಂಕ ಬೇಡ, ಜನರಿಗೆ ಬೇಕಾದಷ್ಟು ಕಡಿಮೆ ಮುಖಬೆಲೆಯ ನೋಟುಗಳು ಲಭ್ಯವಿದ್ದು, ನಿಮಗೆ ಅಗತ್ಯವಿರುವಷ್ಟು ಹಣ ಮಾತ್ರ ಪಡೆದುಕೊಳ್ಳಿ. ಹಣ ಕೂಡಿಡಬೇಡಿ ಎಂದು ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...