alex Certify
ಕನ್ನಡ ದುನಿಯಾ       Mobile App
       

Kannada Duniya

ಅಪಘಾತ ತಡೆಗೆ ಹೆದ್ದಾರಿಯಲ್ಲಿ ಡ್ರೋನ್ ಕಣ್ಗಾವಲು

a drone might be watching youಮುಂಬೈ- ಪುಣೆ ಹೆದ್ದಾರಿಯಲ್ಲಿ ನಡೆಯುವ ಅಪಘಾತಗಳನ್ನು ತಪ್ಪಿಸಲು ಮಹಾರಾಷ್ಟ್ರ ಸರ್ಕಾರ ಹೊಸ ಯೋಜನೆ ರೂಪಿಸಿದೆ.

ಹೆದ್ದಾರಿಗಳಲ್ಲಿ ನಡೆಯುವ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಮೊಟ್ಟಮೊದಲ ಬಾರಿಗೆ ಡ್ರೋನ್ ಅನ್ನು ಕಣ್ಗಾವಲಾಗಿ ಇರಿಸಲಿದೆ. ಮುಂಬೈ- ಪುಣೆ ಮಾರ್ಗದ 95 ಕಿ.ಮೀ. ದೂರವನ್ನು ಅಪಘಾತ ವಲಯ ಎಂದು ಗುರುತಿಸಲಾಗಿದ್ದು ಅಂತಹ ಸ್ಥಳದಲ್ಲಿ ಡ್ರೋನ್ ಗಳು ಕಾರ್ಯ ನಿರ್ವಹಿಸಲಿವೆ.

ಈ ಡ್ರೋನ್ ವೇಗದ ಚಾಲನೆ, ಲೇನ್ ತಪ್ಪಿ ಹೋಗುವುದು, ಓವರ್ ಟೇಕ್ ಮಾಡುವುದು ಮುಂತಾದವನ್ನು ಗಮನಿಸಲಿದೆ. ಸಿಸಿ ಟಿವಿ ಕ್ಯಾಮರಾಗಳಿಗಿಂತ ಡ್ರೋನ್ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಸಚಿವ ದೀಪಕ್ ವಸಂತ್ ಕೇಸರ್ಕರ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...