alex Certify
ಕನ್ನಡ ದುನಿಯಾ       Mobile App
       

Kannada Duniya

ನಡುರಸ್ತೆಯಲ್ಲೇ ಕಣ್ಣೀರಿಟ್ಟ ಮಹಿಳಾ IPS ಅಧಿಕಾರಿ

up-ips

ಲಖ್ನೋ: ಉತ್ತರ ಪ್ರದೇಶದಲ್ಲಿ ಶಾಸಕನೊಬ್ಬ ಮಹಿಳಾ ಅಧಿಕಾರಿಯನ್ನು ನಿಂದಿಸಿದ್ದು, ಇದರಿಂದ ಮನನೊಂದ ಅವರು ನಡುರಸ್ತೆಯಲ್ಲೇ ಕಣ್ಣೀರಿಟ್ಟಿದ್ದಾರೆ.

ಗೋರಖ್ ಪುರದಲ್ಲಿ ಸ್ಥಳೀಯ ಸಮಸ್ಯೆಯೊಂದರ ವಿಚಾರವಾಗಿ ಸಾರ್ವಜನಿಕರು ರಸ್ತೆ ತಡೆ ನಡೆಸಿದ್ದಾರೆ. ಅಲ್ಲಿಗೆ ಮಹಿಳಾ ಐ.ಪಿ.ಎಸ್. ಅಧಿಕಾರಿ ಚಾರು ನಿಗಮ್ ಬಂದಿದ್ದಾರೆ. ಪ್ರೊಬೇಷನರಿ ಅಧಿಕಾರಿಯಾಗಿರುವ ಅವರು ಗೋರಖ್ ಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಂಚಾರಕ್ಕೆ ತೊಂದರೆಯಾಗಿದ್ದರಿಂದ ಪ್ರತಿಭಟನಾಕಾರರನ್ನು ಪೊಲೀಸರು ತೆರವುಗೊಳಿಸಲು ಮುಂದಾಗಿದ್ದು, ಉದ್ವಿಗ್ನ ಸ್ಥಿತಿ ಉಂಟಾಗಿದೆ.

ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಬಂದ ಬಿ.ಜೆ.ಪಿ. ಶಾಸಕ ಡಾ. ರಾಧಮೋಹನ್ ದಾಸ್ ಅಗರ್ ವಾಲ್, ಚಾರು ನಿಗಮ್ ಅವರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.

ಸಾರ್ವಜನಿಕರೆದುರಲ್ಲೇ ನಿಂದಿಸಿ, ದರ್ಪದಿಂದ ಮಾತನಾಡಿದ್ದಾರೆ. ತಾವು ಇಲ್ಲಿ ತರಬೇತಿ ಅಧಿಕಾರಿಯಾಗಿರುವುದಾಗಿ ಚಾರು ನಿಗಮ್ ಹೇಳಿದರೂ ಕೇಳದೇ ನಿಂದಿಸಿದ್ದಾರೆ. ನಿನ್ನೊಂದಿಗೆ ಮಾತನಾಡಲ್ಲ, ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡುವೆ. ನಿನ್ನ ಮಿತಿಯನ್ನು ದಾಟಬೇಡ ಎಂದಿದ್ದಾರೆ. ಇದರಿಂದ ಬೇಸರಗೊಂಡ ಚಾರು ನಿಗಮ್ ನಡುರಸ್ತೆಯಲ್ಲೇ ಕಣ್ಣೀರಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...