alex Certify
ಕನ್ನಡ ದುನಿಯಾ       Mobile App
       

Kannada Duniya

ಎಸ್ಪಿ ಸೋಲಿಗೆ ಅಖಿಲೇಶ್ ರನ್ನು ದೂರಬೇಡಿ: ಮುಲಾಯಂ

mulayam

ಉತ್ತರ ಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಹೀನಾಯ ಸೋಲಿಗೆ ತಮ್ಮ ಪುತ್ರ ಅಖಿಲೇಶ್ ಯಾದವ್ ಹೊಣೆಗಾರನಲ್ಲ ಅಂತಾ ಮುಲಾಯಂ ಸಿಂಗ್  ಯಾದವ್ ಹೇಳಿದ್ದಾರೆ. ಇದು ಪಕ್ಷದ ಸೋಲು ಅಂತಾ ಬಣ್ಣಿಸಿದ್ದಾರೆ.

ಯಾವುದೇ ಒಬ್ಬ ವ್ಯಕ್ತಿ ಈ ಸೋಲಿಗೆ ಕಾರಣನಲ್ಲ, ನಾವು ಜನರನ್ನು ಮೆಚ್ಚಿಸಲು ವಿಫಲರಾಗಿದ್ದೇವೆ ಅಷ್ಟೆ. ಪ್ರತಿಯೊಬ್ಬರೂ ಈ ಸೋಲಿಗೆ ಹೊಣೆಗಾರರು ಅಂತಾ ಅಭಿಪ್ರಾಯಪಟ್ಟಿದ್ದಾರೆ. ರಾಜಕೀಯದಲ್ಲಿ ಸೋಲು ಮತ್ತು ಗೆಲುವು ಸಾಮಾನ್ಯ. ಸಮಾಜವಾದಿ ಪಕ್ಷ ಕೂಡ ಎಷ್ಟೋ ಸಮಸ್ಯೆಗಳನ್ನು ಎದುರಿಸಿದೆ. ಅದೇ ರೀತಿ ಯಶಸ್ಸನ್ನೂ ಸಾಧಿಸಿದೆ.

ಈಗ ಮತ್ತೊಮ್ಮೆ ಅದೇ ರೀತಿಯ ಕಷ್ಟವನ್ನು ಎದುರಿಸಿ ಮುಂದಿನ ಚುನಾವಣೆಯಲ್ಲಿ ಜಯ ಸಾಧಿಸಲಿದ್ದೇವೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಿನ್ನೆಯಷ್ಟೆ ಉತ್ತರಪ್ರದೇಶ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಎಸ್ಪಿ ಹಾಗೂ ಕಾಂಗ್ರೆಸ್ ಮೈತ್ರಿಕೂಟ ಹೀನಾಯ ಸೋಲು ಕಂಡಿತ್ತು. ಉತ್ತರಪ್ರದೇಶ ಜನತೆಗೆ ಮೋಡಿ ಮಾಡಿದ ಬಿಜೆಪಿ 312 ಸ್ಥಾನಗಳನ್ನು ಪಡೆದ್ರೆ, ಎಸ್ಪಿ ಮತ್ತು ಕಾಂಗ್ರೆಸ್ ಕೇವಲ 54 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...