alex Certify
ಕನ್ನಡ ದುನಿಯಾ       Mobile App
       

Kannada Duniya

‘ಅಪಘಾತ ಸಂತ್ರಸ್ಥರಿಗೆ ನೆರವಾಗಲು ಇನ್ಮುಂದೆ ಹಿಂದೇಟು ಹಾಕಬೇಡಿ’

Scene of a car crashಸಾಮಾನ್ಯವಾಗಿ ಅಪಘಾತ ಸಂಭವಿಸಿದಾಗಲೆಲ್ಲ ಗಾಯಗೊಂಡವರಿಗೆ ನೆರವಾಗಲು ಪ್ರತ್ಯಕ್ಷದರ್ಶಿಗಳಾಗ್ಲಿ, ಸಾರ್ವಜನಿಕರಾಗ್ಲಿ ಮುಂದಾಗುವುದಿಲ್ಲ. ವಿಚಾರಣೆ ನೆಪದಲ್ಲಿ ಪೊಲೀಸ್ ಠಾಣೆಗೆ ಅಲೆಯಬೇಕಾಗುತ್ತದೆ ಅನ್ನೋದೇ ಅವರ ಆತಂಕ.

ಆದ್ರೆ ಇನ್ಮೇಲೆ ಇಂತಹ ಯಾವುದೇ ಅಳುಕಿಲ್ಲದೆ ಅಪಘಾತದಲ್ಲಿ ಗಾಯಗೊಂಡವರಿಗೆ ನೀವು ನೆರವಾಗಬಹುದು. ಯಾಕಂದ್ರೆ ನೀವು ಸಾಕ್ಷ್ಯ ಹೇಳಲು ಒಪ್ಪಿದರೆ ಮಾತ್ರ ಪೊಲೀಸರು ನಿಮ್ಮನ್ನು ಕರೆದೊಯ್ಯಬಹುದು, ಹೇಳಿಕೆ ದಾಖಲಿಸುವುದಿದ್ದರೆ ಒಂದೇ ಬಾರಿಗೆ ಆ ಪ್ರಕ್ರಿಯೆಯನ್ನು ಮುಗಿಸಬೇಕು.

ಮಾರ್ಚ್ ನಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನದ ಮೇರೆಗೆ ರಸ್ತೆ ಸಾರಿಗೆ ಸಚಿವಾಲಯ ಈ ಆದೇಶ ಹೊರಡಿಸಿದೆ. ರಸ್ತೆ ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವವರು ಮತ್ತು ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವವರಿಗಾಗಿ ಪ್ರಮಾಣಕ ಕಾರ್ಯಾಚರಣೆಯ ಕಾರ್ಯವಿಧಾನಗಳ ಮೂಲಕ ಹೊಸ ಅವಕಾಶಗಳನ್ನು ಕಲ್ಪಿಸಿದೆ.

ಸರ್ಕಾರಿ ದಾಖಲೆಗಳ ಪ್ರಕಾರ 2015 ರಲ್ಲಿ ದೇಶದಲ್ಲಿ ಪ್ರತಿ ದಿನ ಅಪಘಾತದಲ್ಲಿ 400 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ತುರ್ತು ಚಿಕಿತ್ಸೆ ನೀಡಿದಲ್ಲಿ ಈ ಪೈಕಿ ಅರ್ಧದಷ್ಟು ಮಂದಿಯ ಪ್ರಾಣ ಉಳಿಸಬಹುದು. ಆದ್ರೆ ಕಾನೂನು ಹೋರಾಟದ ಕಿರಿಕಿರಿಗೆ ಹೆದರಿ ಯಾರೂ ಸಹಾಯಕ್ಕೆ ಮುಂದಾಗುತ್ತಿಲ್ಲ. ಕಣ್ಣೆದುರಲ್ಲೇ ಅಪಘಾತಕ್ಕೀಡಾಗಿ ಪ್ರಾಣಭಿಕ್ಷೆ ಬೇಡುತ್ತಿದ್ದರೂ ಯಾರೂ ನೆರವಾಗದ ಸಾಕಷ್ಟು ಉದಾಹರಣೆಗಳಿವೆ. ಜನರ ಈ ಮನೋಭಾವವನ್ನು ದೂರ ಮಾಡಲೆಂದೇ ಸಚಿವಾಲಯ ಹೊಸ ಆದೇಶ ಜಾರಿ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...