alex Certify
ಕನ್ನಡ ದುನಿಯಾ       Mobile App
       

Kannada Duniya

ಗುಜರಾತ್ ಕತ್ತೆ ಹೇಳಿಕೆಗೆ ಮೋದಿ ತಿರುಗೇಟು

modicampeignup_pti

ಉತ್ತರ ಪ್ರದೇಶದಲ್ಲಿ ಘಟಾನುಘಟಿ ನಾಯಕರ ಪ್ರಚಾರ ಭರಾಟೆ ಜೋರಾಗಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ನಾಯಕರ ಮಧ್ಯೆ ಮಾತಿನ ಸಮರ ತಾರಕಕ್ಕೇರಿದೆ. ಮೊನ್ನೆಯಷ್ಟೆ ಸಿಎಂ ಅಖಿಲೇಶ್ ಯಾದವ್, ಪ್ರಧಾನಿ ಮೋದಿ ಅವರನ್ನು ‘ಗುಜರಾತ್ ನ ಕತ್ತೆ’ ಅಂತಾ ಸಂಭೋದಿಸಿದ್ರು.

ಇವತ್ತು ಚುನಾವಣಾ ಭಾಷಣ ಮಾಡಿದ ಮೋದಿ, ಅಖಿಲೇಶ್ ಟೀಕೆಗೆ ತಿರುಗೇಟು ನೀಡಿದ್ದಾರೆ. ‘ಈ ದೇಶದ ಜನರೇ ನನಗೆ ಸರ್ವಸ್ವ. ನಾನು ಕತ್ತೆಗಳಿಂದ್ಲೂ ಪ್ರೇರಣೆ ಪಡೆಯುತ್ತೇನೆ. ಯಾಕಂದ್ರೆ ಜನರಿಗಾಗಿ ಹಗಲು ರಾತ್ರಿ ದುಡಿಯುತ್ತೇನೆ’ ಅಂತಾ ಹೇಳಿದ್ದಾರೆ.

ಕಾಂಗ್ರೆಸ್ ಜೊತೆಗಿನ ದೋಸ್ತಿ ನಿಮ್ಮನ್ನೂ ಮುಳುಗಿಸೋದು ಖಚಿತ ಅಂತಾ ಮೋದಿ, ಅಖಿಲೇಶ್ ಯಾದವ್ ರನ್ನು ಇದೇ ವೇಳೆ ಎಚ್ಚರಿಸಿದ್ದಾರೆ. ಉತ್ತರಪ್ರದೇಶ ವಿಧಾನಸಭೆಗೆ ಇವತ್ತು ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ. ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ ಇದು ಮೋದಿ ಅವರ ಅತಿ ದೊಡ್ಡ ಗೆಲುವು ಎಂದೇ ಹೇಳಲಾಗ್ತಿದೆ. ಬಿಜೆಪಿಯನ್ನು ಶತಾಯಗತಾಯ ಸೋಲಿಸಲು ಪಣತೊಟ್ಟಿರುವ ಎಸ್ಪಿ, ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...