alex Certify
ಕನ್ನಡ ದುನಿಯಾ       Mobile App
       

Kannada Duniya

ತಿಮ್ಮಪ್ಪನ ಹುಂಡಿಗೆ ಬೀಳ್ತಿದ್ದ ಹಣದಲ್ಲಿ ಭಾರೀ ಇಳಿಕೆ

ಭಾರತದ ಅತ್ಯಂತ ಶ್ರೀಮಂತ ದೇವಸ್ಥಾನ ತಿರುಪತಿ ತಿರುಮಲದಲ್ಲಿ ಭಕ್ತರು ಹುಂಡಿಗೆ ಹಾಕುವ ಹಣದಲ್ಲಿ ಇಳಿಕೆ ಕಂಡು ಬಂದಿದೆ. ತಿಮ್ಮಪ್ಪನ ಸನ್ನಿಧಿಯಲ್ಲಿ ಆರು ದಿನಗಳ ಕಾಲ ವೈದಿಕ ಕಾರ್ಯಕ್ರಮ ನಡೆಯುತ್ತಿದೆ. ಇದು ದೇವಸ್ಥಾನದ ಹುಂಡಿ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ.

ಭಾನುವಾರ ಹುಂಡಿ ಹಣವನ್ನು ಲೆಕ್ಕ ಮಾಡಲಾಗಿದೆ. ಆಡಳಿತ ಮಂಡಳಿ ಪ್ರಕಾರ, ಪ್ರತಿ ಬಾರಿ ಬಂಗಾರದ ಆಭರಣ ಹೊರತುಪಡಿಸಿ ಮೂರು ಕೋಟಿಗೂ ಹೆಚ್ಚು ನಗದು ಸಿಗ್ತಿತ್ತು. ಆದ್ರೆ ಈ ಬಾರಿ 75 ಲಕ್ಷ ರೂಪಾಯಿಯಷ್ಟೇ ದೇವಸ್ಥಾನದ ಹುಂಡಿ ಸೇರಿದೆ.

12 ವರ್ಷಗಳ ನಂತ್ರ ದೇವಸ್ಥಾನದಲ್ಲಿ ಆರು ದಿನಗಳ ಕಾಲ ವೈದಿಕ ಕಾರ್ಯಕ್ರಮ ನಡೆಯುತ್ತಿದೆ. ಆಗಸ್ಟ್ 9ರಿಂದ ಕಾರ್ಯಕ್ರಮ ಶುರುವಾಗಿದ್ದು, ಆಗಸ್ಟ್ 17ರವರೆಗೆ ನಡೆಯಲಿದೆ. ಮಹಾ ಸಂಪ್ರೋಕ್ಷಣ ವಿಧಿ ನೆರವೇರುತ್ತಿರುವ ಕಾರಣ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ. ಭಕ್ತರಿಗೆ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ನೀಡಿಲ್ಲ. ಹಾಗಾಗಿ ಹುಂಡಿಗೆ ಬರ್ತಿದ್ದ ಹಣದಲ್ಲಿ ಇಳಿಕೆಯಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...