alex Certify
ಕನ್ನಡ ದುನಿಯಾ       Mobile App
       

Kannada Duniya

‘ಕೇರಳ ನೆರೆ ಪರಿಹಾರ ನಿಧಿಗೆ ಹಣ ಪಾವತಿಸಿ ಜಾಮೀನು ಪಡೆಯಿರಿ’

ಜಾರ್ಖಂಡ್ ಹೈಕೋರ್ಟ್ ಮೂವರು ಆರೋಪಿಗಳ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ರೀತಿ ಎಲ್ಲರನ್ನು ಆಕರ್ಷಿಸಿದೆ. ಕೇರಳದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ಪಾವತಿಸಿ, ದಾಖಲೆ ನೀಡಿ, ಜಾಮೀನು ಪಡೆಯಿರಿ ಎಂದು ಕೋರ್ಟ್ ತಿಳಿಸಿದೆ.

ವಂಚನೆ ಹಾಗೂ ಫೋರ್ಜರಿ ಪ್ರಕರಣದ ಮೂವರು ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

ಕೇರಳದಲ್ಲಿ ಪ್ರವಾಹ ಜನರ ನಿದ್ದೆಗೆಡಿಸಿದೆ. ಪ್ರವಾಹಕ್ಕೆ ಕೇರಳ ನಲುಗಿದ್ದು ದೇವರ ನಾಡಿಗೆ ಪರಿಹಾರದ ಅವಶ್ಯಕತೆ ಇರೋದನ್ನು ಕೋರ್ಟ್ ಗಮನಿಸಿದೆ. ಹೀಗಾಗಿ ವಂಚನೆ ಹಾಗೂ ಫೋರ್ಜರಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಮೂವರಿಗೆ, ಕೇರಳ ಪರಿಹಾರ ನಿಧಿಗೆ ಹಣ ನೀಡಿದ್ರೆ ಜಾಮೀನು ಮಂಜೂರು ಮಾಡೋದಾಗಿ ಕೋರ್ಟ್ ತಿಳಿಸಿದೆ.

ಉತ್ಪಲ್ ರೇ ಕೇರಳಕ್ಕೆ 7000 ರೂಪಾಯಿ ಪಾವತಿಸಿದ್ರೆ, ಜಾಮೀನು ನೀಡಲಾಗುವುದು ಎಂದು ಕೋರ್ಟ್ ತಿಳಿಸಿದೆ. ಅಲ್ಲದೆ ಧಾನೇಶ್ವರ್ ಮಂಡಲ್ ಹಾಗೂ ಶಂಭು ಮಂಡಲ್ ಸಹ ಪರಿಹಾರ ನಿಧಿಗೆ ಐದು ಸಾವಿರ ರೂಪಾಯಿ ನೀಡುವಂತೆ ಸೂಚಿಸಿದೆ. ಈ ಆರೋಪಿಗಳು ಪರಿಹಾರ ನಿಧಿಗೆ ನೀಡಿದ ಹಣದ ಬಗ್ಗೆ ಸಾಕ್ಷ್ಯ ನೀಡುವಂತೆ ಆದೇಶಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...